ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಇಲಿಯಾನ ಇಂದು ಅಚ್ಚರಿಯ ಸುದ್ದಿಯೊಂದನ್ನು ಹಂಚಿಕೊಂಡಿದ್ದು, ಅದೇನೆಂದರೆ ‘ನಾನು ಮಗುವಿನ ನಿರೀಕ್ಷೆಯಲ್ಲಿದ್ದೇನೆ’ ಎಂದು ಪೋಸ್ಟ್ ಮಾಡಿದ್ದರು.
ಆದ್ರೆ ಇಲ್ಲಿ ಮದುವೆ ಸುದ್ದಿ ನೀಡದೇ ಮಗು ಹೇಗೆ? ಎಂದು ಎಲ್ಲರಲ್ಲೂ ಪ್ರಶ್ನೆ ಮೂಡಿತ್ತು. ಇಲಿಯಾನ ತಾಯಿ ಕೂಡ ಪೋಸ್ಟ್ ಮಾಡಿ ಈ ಕುರಿತು ತಿಳಿಸಿದ್ದಾರೆ.
ನಾನು ಮಗುವಿನ ನಿರೀಕ್ಷೆಯಲ್ಲಿರುವೆ ಎಂದು ಹಾಕಲಾದ ಪೋಸ್ಟ್ ಗೆ ಇಲಿಯಾನ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದು. ನಾನು ಮೊಮ್ಮಗುವಿನ ನಿರೀಕ್ಷೆಯಲ್ಲಿರುವೆ. ಕಾಯುವುದಕ್ಕೆ ಆಗುತ್ತಿಲ್ಲ, ಬೇಗ ಮೊಮ್ಮಗು ಮನೆಗೆ ಬರಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ನಿಜವಾಗಿಯೂ ಇಲಿಯಾನ ತಾಯಿ ಆಗುತ್ತಿದ್ದಾರಾ? ಹಾಗಾದರೆ, ಆ ಮಗುವಿನ ತಂದೆ ಯಾರಿರಬಹುದು ಎನ್ನುವ ಅನುಮಾನ ಮೂಡಿದೆ.
ತಾಯಿ ಆಗುತ್ತಿರುವ ಕುರಿತು ಇಲಿಯಾನ ಇನ್ಸ್ಟಾದಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿದ್ದು, ‘ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ’ ಎಂದು ಬರಹವನ್ನೂ ಬರೆದಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ‘ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್’ ಎನ್ನುವ ಬರಹವಿದೆ.
ಇಲಿಯಾನ ಪ್ರೆಗ್ನಿನ್ಸಿ (Pregnancy) ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಶುಭಾಶಯಗಳನ್ನು ಕೋರಿದ್ದರೆ, ಇನ್ನೂ ಕೆಲವರು ಮದುವೆ ಆಗದೇ ಮಗು ಹೇಗೆ? ಯಾವಾಗ ಮದುವೆಯಾದೆ? ಮಗುವಿನ ತಂದೆ ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು ಮಾಡಿದ್ದಾರೆ.