ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಭೇಟಿಯಾದ ನಟಿ ಕಂಗನಾ ರಣಾವತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೇಲ್ ಹಮಾಸ್ ನಡುವಿನ ಕದನದ ನಡುವೆ ಇತ್ತ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿ ರಾಯಭಾರಿ ನೌರ್ ಗಿಲೋನ್ (Naor Gilon) ಅವರನ್ನು ನಟಿ ಕಂಗನಾ ರಣಾವತ್ (Kangana Ranaut) ಭೇಟಿಯಾಗಿದ್ದಾರೆ.

ಈ ವೇಳೆ (Israel) ಹಮಾಸ್ (Hamas) ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ.

ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ (ಮಂಗಳವಾರ) ನಾನು ರಾವಣ ದಹನಕ್ಕಾಗಿ ದೆಹಲಿಗೆ ಬಂದಿದ್ದೆ. ಈ ಸಮಯದಲ್ಲಿ ಇಂದಿನ ಆಧುನಿಕ ರಾವಣ ಮತ್ತು ಹಮಾಸ್‌ನಂತಹ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಜನರನ್ನು ಭೇಟಿಯಾಗಬೇಕೆಂದು ನನಗೆ ಅನಿಸಿತು. ಈ ಹಿನ್ನಲೆ ಇಸ್ರೇಲ್ ರಾಯಭಾರ ಕಚೇರಿಗೆ ಭೇಟಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಸಣ್ಣ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಮಾಸ್ ಭೀಕರವಾಗಿ ಹತ್ಯೆ ಮಾಡಿದೆ. ಭಯೋತ್ಪಾದನೆ ವಿರುದ್ಧದ ಈ ಯುದ್ಧದಲ್ಲಿ ಇಸ್ರೇಲ್ ಜಯಶಾಲಿಯಾಗಲಿದೆ ಎಂಬ ಸಂಪೂರ್ಣ ಭರವಸೆ ನನಗಿದೆ. ಭಾರತದ ಸ್ವಾವಲಂಬಿ ಯುದ್ಧ ವಿಮಾನ ತೇಜಸ್ ಮತ್ತು ನನ್ನ ಮುಂಬರುವ ಚಿತ್ರ ತೇಜಸ್ ಬಗ್ಗೆ ನಾನು ಅವರೊಂದಿಗೆ ಚರ್ಚಿಸಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!