ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಉರ್ಫಿ ಜಾವೇದ್ ಗೆ ವಚನಗಾರ್ತಿ ಅಕ್ಕಮಹಾದೇವಿಯ (Akkamahadevi) ಪಾಠ ಮಾಡಿದ್ದಾರೆ.
ಕಾಸ್ಟ್ಯೂಮ್ ವಿಚಾರವಾಗಿ ಇಬ್ಬರ ಮಧ್ಯ ಚರ್ಚೆ ಶುರುವಾಗಿತ್ತು. ಈ ವಾದದಲ್ಲಿ ಅಕ್ಕಮಹಾದೇವಿಯ ಕುರಿತು ಉರ್ಫಿಗೆ ಕಂಗನಾ ಪರಿಚಯಿಸಿದ್ದಾರೆ.
ಈ ಹಿಂದೆ ಕಂಗನಾ ಖಾನ್ ಗಳ (Khan) ವಿಚಾರದಲ್ಲಿ ಟ್ವೀಟ್ ವೊಂದನ್ನು ಮಾಡಿದ್ದರು. ಅದರಲ್ಲಿ ಈ ದೇಶವು ಎಲ್ಲ ಖಾನ್ ಗಳನ್ನು ಮಾತ್ರ ಪ್ರೀತಿಸುತ್ತದೆ ಎಂದು ಬರೆದುಕೊಂಡಿದ್ದರು. ಅಲ್ಲದೇ, ಮುಸ್ಲಿಂ ನಟಿಯರ ಮೇಲೆ ಗೀಳನ್ನು ಅದು ಹೊಂದಿದೆ ಎಂದೂ ಬರೆದುಕೊಂಡಿದ್ದರು. ಈ ಬರಹ ಉರ್ಫಿಗೆ ಇಷ್ಟವಾಗಿರಲಿಲ್ಲವಂತೆ. ಹಾಗಾಗಿ ಕಂಗನಾಗೆ ತಿರುಗೇಟು ನೀಡಿದ್ದ ಉರ್ಫಿ, ‘ಮುಸ್ಲಿಂ ನಟ, ಹಿಂದು ನಟ ಅಂತ ವಿಂಗಡಣೆ ಏಕೆ? ಕಲೆಯಲ್ಲಿ ಧರ್ಮವಿಲ್ಲ. ಕಲಾವಿದರ ಮಾತ್ರ ಇರುತ್ತಾರೆ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಕಂಗನಾ ಅಕ್ಕಮಹಾದೇವಿಯ ಪಾಠ ಮಾಡಿದ್ದಾರೆ.
‘ಅಕ್ಕ ಮಹಾದೇವಿ ಭಾರತದಲ್ಲಿ ರಾಣಿ ಆಗಿದ್ದವರು. ಅವರಿಗೆ ಭಗವಂತನ ಮೇಲೆ ಅತೀವ ಪ್ರೀತಿ. ನೀನು ಭಗವಂತನನ್ನೇ ಪ್ರೀತಿಸುವುದಾದರೆ, ನನ್ನಿಂದ ಯಾವುದನ್ನೂ ನೀನು ತಗೆದುಕೊಂಡು ಹೋಗಬಾರದು ಎಂದು ಗಂಡ ತಾಕೀತು ಮಾಡುತ್ತಾನೆ. ಆಕೆ ವಿವಸ್ತ್ರಳಾಗಿ ಅಲ್ಲಿಂದ ಹೊರಡುತ್ತಾಳೆ. ಯಾವತ್ತೂ ಆಕೆ ಬಟ್ಟೆ ತೊಡಲಿಲ್ಲ. ಮಹಾದೇವಿ ತುಂಬಾ ಶ್ರೇಷ್ಠಳು. ನೀನೂ ಕೂಡ ದೇಹದ ಬಗ್ಗೆ ನಿಂದಿಸಲು ಯಾರಿಗೂ ಬಿಡಬೇಡ. ನೀನು ದೈವಾಶಂವನ್ನು ಹೊಂದಿದವಳು’ ಎಂದು ಉರ್ಫಿಯನ್ನು ಹೋಲಿಸಿ ಟ್ವಿಟ್ ಮಾಡಿದ್ದಾಳೆ.