ಹೊಸದಿಗಂತ ಡಿಜಿಟಲ್ ಡೆಸ್ಕ್;
ನಟಿ ಲಾಸ್ಯ ನಾಗಾರಾಜ್ ತಾಯಿ ಸುಧಾ ಮೇಲೆ ಅವರ ಸಹೋದರಿ ಮಂಗಳ ಶ್ರೀಧರ್ ಹಲ್ಲೆ ನಡೆಸಿದ್ದಾರೆ.
ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ಘಟನೆ ನಡೆದಿದೆ. ಒಂದೇ ಕಟ್ಟಡದ ಎರಡು ಮಹಡಿಗಳಲ್ಲಿ ಅಕ್ಕ-ತಂಗಿಯ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊದಲ ಮಹಡಿ ಮನೆಯಲ್ಲಿ ನಟಿ ಲಾಸ್ಯ ನಾಗರಾಜ್ ಮತ್ತು ತಾಯಿ ವಾಸವಾಗಿದ್ದಾರೆ. ಸುಧಾ ನಾಗರಾಜ್ ಮೂಲತಃ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು ಗ್ರೌಂಡ್ ಫ್ಲೋರ್‌ನ ಪಾರ್ಕಿಂಗ್ ಜಾಗದಲ್ಲಿ ಹಲವು ವರ್ಷಗಳಿಂದ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಇದೇ ವಿಚಾರಕ್ಕೆ ಪದೇ ಪದೇ ಕಿರಿಕ್ ಮಾಡುತ್ತಿದ್ದ ತಂಗಿ ಮಂಗಳ ಬುಧವಾರ ಪತಿಯ ಜೊತೆ ಸೇರಿ ಅಕ್ಕ ಸುಧಾ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಹಲ್ಲೆ ಕುರಿತು ಲಾಸ್ಯ ನಾಗರಾಜ್ ತಾಯಿ ಸುಧಾಪ್ರತಿಕ್ರಿಯಿಸಿ, ಕಳೆದ 40 ವರ್ಷಗಳಿಂದ ಭರತನಾಟ್ಯ ಕ್ಲಾಸ್ ಅನ್ನು ಮನೆಯ ಬೇಸ್‌ಮೇಂಟ್‌ನಲ್ಲಿ ನಡೆಸುತ್ತಿದ್ದೇನೆ. ಇದೀಗ ಸೆಕೆಂಡ್ ಫ್ಲೋರ್‌ನಲ್ಲಿ ಕ್ಲಾಸ್ ಕಟ್ಟಿಸೋಕೆ ರೆಡಿ ಮಾಡುತ್ತಿದ್ದೆ, ಹೀಗಾಗಿ ಡ್ಯಾನ್ಸ್ ಕ್ಲಾಸ್ ವಿಚಾರವಾಗಿ ಪದೇ ಪದೇ ಸಹೋದರಿ ಬಂದು ಜಗಳ ಮಾಡುತ್ತಿದ್ದರು. ನಿನ್ನೆ ಪತಿಯೊಂದಿಗೆ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.