ಸೋತು ಸೊರಗಿ ಹೋದ ಮಾಣಿಕ್ಯ ನಟಿ: ಜೈಲು ಸೇರಿದ ಎರಡೇ ದಿನಕ್ಕೆ ಮಂಕಾದ ರನ್ಯಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮವಾಗಿ ಚಿನ್ನ ಸಾಗಾಣಿಕೆ ಅರೋಪದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್​, ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿದ್ದು, ರನ್ಯಾಳ ಜೈಲಿನ ಎಕ್ಸ್​ಕ್ಲ್ಯೂಸಿವ್​ ಫೋಟೋ ವೈರಲ್ ಆಗಿದೆ.

ಜೈಲು ಸೇರಿರುವ ರನ್ಯಾ ಎರಡನೇ ಎರಡು ದಿನಕ್ಕೆ ಸೋರಗಿ ಹೋಗಿದ್ದಾರೆ. ಸರಿಯಾಗಿ ನಿದ್ದೆ ಊಟ ಮಾಡುತ್ತಿಲ್ಲ. ಹೀಗಾಗಿ ಜೈಲಲ್ಲಿ ರನ್ಯಾ ಸೊರಗಿ ಹೋಗಿದ್ದಾರೆ.

ಜೈಲಿನಲ್ಲಿ ನಿದ್ದೆಯಿಲ್ಲದೆ ಕಣ್ಣುಗಳು ಕೆಂಪಾಗಿ ಊದಿಕೊಂಡಿವೆ. ಕಣ್ಣುಗಳ ಸುತ್ತ ಡಾರ್ಕ್​​ಸರ್ಕಲ್ ತುಂಬಿಕೊಂಡಿದೆ. ನಟಿಯಾಗಿದ್ದಾಗ ಪಳಪಳ ಹೊಳೆಯುತ್ತಿದ್ದ ರನ್ಯಾ ಅವರು ಈಗ ಮಂಕಾಗಿದ್ದಾರೆ.

ಈ ನಡುವೆ ರನ್ಯಾ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಬೇಲ್ ನೀಡಬಾರದು ಎಂದು ಡಿಆರ್​ಐ ಅಧಿಕಾರಿಗಳ ಪರ ವಕೀಲರು ವಾದ ಮಾಡಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ದಂಧೆಯಲ್ಲಿ ರನ್ಯಾ ರಾವ್ ಜೊತೆ ಅನೇಕರು ಭಾಗಿಯಾಗಿರುವ ಶಂಕೆ ಇದೆ. ಆ ಕುರಿತು ತನಿಖೆ ಮಾಡುವುದು ಬಾಕಿ ಇದೆ. ಹಾಗಾಗಿ ಅವರನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಡಿಆರ್​ಐ ಅಧಿಕಾರಿಗಳು ಕೋರ್ಟ್​ಗೆ ಕೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!