ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೃಣಾಲ್ ಠಾಕೂರ್ ಸೂರ್ಯ ಜೊತೆ ‘ಕಂಗುವ’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅದು ಸಾಧ್ಯ ಆಗಿರಲಿಲ್ಲ. ಈಗ ಅವರಿಗೆ ಮತ್ತೊಮ್ಮೆ ಸೂರ್ಯ ಜೊತೆ ನಟಿಸೋ ಅವಕಾಶ ಸಿಕ್ಕಿದೆ.
ಕಂಗುವ’ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲ ಎನ್ನಲಾಗಿದೆ. ಕೇವಲ 20 ನಿಮಿಷ ಮಾತ್ರ ನಾಯಕಿ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ, ಮೃಣಾಲ್ ಈ ಆಫರ್ ಬಿಟ್ಟರೂ ಹೆಚ್ಚು ತೊಂದರೆ ಏನಿಲ್ಲ. ಈಗ ಸೂರ್ಯ ಅವರ ಮುಂದಿನ ಚಿತ್ರಕ್ಕೆ ಮೃಣಾಲ್ ನಾಯಕಿ ಆಗಿದ್ದಾರೆ.
ಸೂರ್ಯ ಅವರ ಮುಂದಿನ ಚಿತ್ರ ಫ್ಯಾಂಟಸಿ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಆರ್ಜೆ ಬಾಲಾಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.