ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆ ಪಾಪಾರಾಜಿಗಳ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.ಗೆಳೆಯನ ಜೊತೆ ಕಾರಿನಲ್ಲಿ ಕುಳಿತು ಹೋಗುವಾಗ ಕ್ಯಾಮೆರಾ ಕಣ್ಣಿಗೆ ನಟಿ ಸೆರೆಯಾಗಿದ್ದಾರೆ.
ಪೂಜಾ ಹೆಗ್ಡೆ ಹೆಸರು ಸಾಕಷ್ಟು ನಟರ ಜೊತೆ ಸೇರಿಕೊಂಡಿತ್ತು. ಅದರಲ್ಲೂ ಸಲ್ಮಾನ್ ಖಾನ್ (Salman Khan) ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆ ನಂತರ ಆ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ಸಿಕ್ಕಿತ್ತು. ಇದೀಗ ಬಾಲಿವುಡ್ ಹೀರೋ ರೋಹನ್ ಮೆಹ್ರಾ ಜೊತೆ ಪೂಜಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಹೊಟೇಲ್ ನಿಂದ ಹೊರಬಂದು ಕಾರಿನಲ್ಲಿ ರೋಹನ್ ಮೆಹ್ರಾ (Rohan Mehra) ಜೊತೆ ಹೋಗುವಾಗ ಕ್ಯಾಮೆರಾ ಕಣ್ಣಿಗೆ ಪೂಜಾ ಸೆರೆಯಾಗಿದ್ದಾರೆ. ಕ್ಯಾಮೆರಾ ಕಾಣಿಸುತ್ತಿದ್ದಂತೆ ನಟಿ ನಾಚಿ ನೀರಾಗಿದ್ದಾರೆ. ನಟಿಯ ಈ ನಡೆ ನೋಡಿ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತೆ ಆಗಿದೆ.
#Poojahegde with her boy friend 💔pic.twitter.com/JhtUYaISm8
— Kolly Censor (@KollyCensor) March 31, 2024
ಕಳೆದ ವರ್ಷ ನಟಿಯ ಮನೆಯಲ್ಲಿ ಮದುವೆ ಮಾತುಕತೆ ನಡೆದಿದೆ ಎಂದು ಸುದ್ದಿಯಾಗಿತ್ತು. ಸತತ ಸಿನಿಮಾಗಳ ಸೋಲುಗಳ ಬೆನ್ನಲ್ಲೇ ನಟಿ ಮದುವೆ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಕಳೆದ ಜನವರಿಯಲ್ಲಿ ಪೂಜಾ ಸಹೋದರ ರಿಷಬ್ ಹೆಗ್ಡೆ ಮದುವೆ ಕೂಡ ಅದ್ಧೂರಿಯಾಗಿ ಜರುಗಿತ್ತು. ಹಾಗಾಗಿ ಪೂಜಾ ಮದುವೆ ಬಗ್ಗೆ ಹೆಚ್ಚು ಚರ್ಚೆ ಶುರುವಾಗಿತ್ತು. ಇದೀಗ ಅಂತೆ ಕಂತೆ ಸುದ್ದಿಗೆಲ್ಲಾ ಬ್ರೇಕ್ ಹಾಕಿ, ರೋಹನ್ ಮೆಹ್ರಾ ಜೊತೆ ಸಂಬಂಧವನ್ನು ನಟಿ ಅಧಿಕೃತಪಡಿಸುತ್ತಾರಾ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಕಾದುನೋಡಬೇಕಿದೆ.