CINE | ಸ್ಯಾಂಡಲ್‌ವುಡ್‌ನಲ್ಲಿ ನಟಿಸೋದಕ್ಕೆ ಹಲವು ಕಥೆ ಕೇಳಿದ್ದೆ, ಇಷ್ಟ ಆಗಿಲ್ಲ ಎಂದ ನಟಿ ಪೂಜಾ ಹೆಗ್ಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡತಿ ಪೂಜಾ ಹೆಗ್ಡೆಗೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆಯಂತೆ! ಕನ್ನಡ ಸಿನಿಮಾದಲ್ಲಿ ನಟಿಸೋಕೆ ನನಗೇನೂ ಅಭ್ಯಂತರ ಇಲ್ಲ. ಆದರೆ ನನಗೆ ಬೇಕಾದ ರೀತಿಯ ಸ್ಕ್ರಿಪ್ಟ್‌ ಸಿಕ್ಕಿಲ್ಲ ಎಂದಿದ್ದಾರೆ.

ಪೂಜಾ ಹೆಗ್ಡೆ ಪ್ರಸ್ತುತ ಸೂರ್ಯಜೊತೆಗಿನ ‘ರೆಟ್ರೋ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂರ್ದಶನವೊಂದರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಅವರು ಮಾತನಾಡಿದ್ದಾರೆ.

ನನ್ನ ಪೋಷಕರಿಂದ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಒತ್ತಡವಿದೆ. ನಾನು ಮೂಲತಃ ಕರ್ನಾಟಕದವಳು, ತುಳು ಹುಡುಗಿ. ಹಾಗಾಗಿ ನನ್ನ ಪೋಷಕರು ಆಗಾಗ ಕನ್ನಡದಲ್ಲಿ ಸಿನಿಮಾ ಮಾಡಲು ಹೇಳುತ್ತಾ ಇರುತ್ತಾರೆ. ಕನ್ನಡದಲ್ಲಿ ಹಲವು ಕಥೆಗಳನ್ನು ಈಗಾಗಲೇ ಕೇಳಿದ್ದೇನೆ. ಯಾವುದು ಇಷ್ಟವಾಗಿಲ್ಲ. ಉತ್ತಮ ಕಥೆ ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!