ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ರಾಯಲ್ ಎನ್‌ಫೀಲ್ಡ್ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದಾರೆ. ಆದರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಈ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ. ಸೆಲೆಬ್ರಿಟಿಗಳು ಮಾಡಿದ್ದನ್ನು ಎಷ್ಟೋ ಮಂದಿ ಫಾಲೋ ಮಾಡ್ತಾರೆ. ಅವರೇ ಹೀಗೆ ರೂಲ್ಸ್ ಫಾಲೋ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಬೈಕ್ ಓಡಿಸುತ್ತಿರುವ ಯುವತಿಯೂ ಸಹ ಹೆಲ್ಮೆಟ್ ಧರಿಸಿಲ್ಲ. ಬೈಕ್ ಓಡಿಸುತ್ತಿರುವ ಯುವತಿಯ ವಯಸ್ಸಿನ ಬಗ್ಗೆಯೂ ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಆ ಯುವತಿ ಅಪ್ರಾಪ್ತ ವಯಸ್ಕಳೇ ಅಥವಾ ಪರವಾನಗಿ ಹೊಂದಿದ್ದಾರೆಯೇ ಎಂಬ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಹೆಲ್ಮೆಟ್ ಧರಿಸದಿರುವುದು ಸ್ಪಷ್ಟವಾಗಿ ಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟಿದೆ.



