ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ ಹಾಕಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಪ್ರಮುಖ A1 ಆರೋಪಿ ಪ್ರಮೋದ್ ಗೌಡ (18) ನನ್ನು ಇಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಮೋದ್ ಫ್ರೆಂಡ್ ಮೊಬೈಲ್ ನಲ್ಲಿ ಜಾಲತಾಣ ಓಪನ್ ಮಾಡಿದ್ದ. ಈ ವೇಳೆ ಪ್ರಮೋದ್ ಫ್ರೆಂಡ್ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಈ ಕುರಿತಂತೆ ನಟಿ ರಮ್ಯಾ ಬೆಂಗಳೂರು ಕಮಿಷನರ್ ಗೆ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಕಮಿಷನರ್ ಸಿಸಿಬಿಗೆ ವರ್ಗಾಯಿಸಿದರು.
ಈ ವೇಳೆ ಸಿಸಿಬಿ ಸುಮಾರು 48 ಐಡಿ ಪತ್ತೆ ಮಾಡಿದ್ದು ಅದರಲ್ಲಿ ಈಗಾಗಲೇ ಹಲವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ಕೆಆರ್ ಪುರಂ ಮೂಲದ ಪ್ರಮೋದನ ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ.