ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ನಟನೆಯ ಕುಬೇರ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದೇ ಖುಷಿಯಲ್ಲಿ ಅವರು ಮತ್ತೊಂದು ಸಿನಿಮಾ ಘೋಷಿಸಲು ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರದ್ದು ವಾರಿಯರ್ ಅವತಾರ. ಈ ಚಿತ್ರದ ಟೈಟಲ್ ಜೂನ್ 27ರಂದು ಅನೌನ್ಸ್ ಆಗಲಿದೆ.
ರಶ್ಮಿಕಾ ಮಂದಣ್ಣ ಈವರೆಗೆ ಮಾಡಿದ ಬಹುತೇಕ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಮರಸುತ್ತುವ ಪಾತ್ರ ಸಿಕ್ಕಿದ್ದೇ ಹೆಚ್ಚು. ಈಗ ಅವರಿಗೆ ಮಹಿಳಾ ಪ್ರಧಾನ ಸಿನಿಮಾ ಸಿಕ್ಕಿದೆ ಎನ್ನಲಾಗಿದೆ. ಸದ್ಯ ಅಸ್ಪಷ್ಟವಾದ ಪೋಸ್ಟರ್ ಒಂದನ್ನು ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ.
ಕಾಡಿನ ಮಧ್ಯೆ ರಶ್ಮಿಕಾ ನಿಂತಿದ್ದಾರೆ. ಅವರು ವಾರಿಯರ್ ರೀತಿ ಕಾಣಿಸಿದ್ದಾರೆ. ಅವರ ಕೈಯಲ್ಲಿ ಯಾವುದೋ ಆಯುಧ ರೀತಿಯ ವಸ್ತುವಿದೆ. ‘ಬೇಟೆಗೊಳಗಾಗಿ ಗಾಯಗೊಂಡರೂ ಅಚಲವಾಗಿ ನಿಂತಿದ್ದಾಳೆ’ಎಂಬ ಅರ್ಥ ಬರುವ ರೀತಿಯಲ್ಲಿ ಪೋಸ್ಟರ್ ಮೇಲೆ ಬರೆಯಲಾಗಿದೆ. ಈ ಸಿನಿಮಾದ ಪೋಸ್ಟರ್ ಹಾಗೂ ಟೈಟಲ್ ಜೂನ್ 27ರ ಮುಂಜಾನೆ 10:08ಕ್ಕೆ ರಿಲೀಸ್ ಆಗಲಿದೆ.