ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಜೊತೆ ಕನ್ನಡದ ಸಿಂಪಲ್ ಬ್ಯೂಟಿ ರುಕ್ಮಿಣಿ ವಸಂತ್ ತೆರೆ ಹಂಚಿಕೊಳ್ಳಲಿದ್ದಾರಂತೆ!
ಹೌದು, ಹೊಸ ಚಿತ್ರಕ್ಕೆ ಕ್ಲಾಕ್ಸ್ ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಕ್ಲಾಕ್ಸ್ ಈ ಹಿಂದೆ ‘ಬೆದೂರು ಲಂಕಾ 2012 ’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಯುವ ನಿರ್ದೇಶಕ ಈಗ ನಾಗ ಚೈತನ್ಯ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಚಿತ್ರವನ್ನು ಅವರು ಸುಂದರವಾದ ಪ್ರೇಮಕಥೆಯನ್ನಾಗಿ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಹುಬೇಡಿಕೆಯ ನಟಿಯಾಗಿರುವ ರುಕ್ಮಿಣಿ ವಸಂತ್‌ಗೆ ಕಾಂತಾರ ಚಾಪ್ಟರ್ ಒನ್ ಬಿಗ್ ಬ್ರೇಕ್ ನೀಡಿತ್ತು. ಇದೀಗ ಟಾಕ್ಸಿಕ್ ಸಿನಿಮಾದಲ್ಲಿಯೂ ರುಕ್ಮಿಣಿ ನಟಿಸುತ್ತಿದ್ದಾರೆ.



