‘ಮೈತ್ರಿ ಮುಟ್ಟಿನ ಕಪ್’ ಯೋಜನೆಯ ರಾಯಭಾರಿಯಾಗಿ ನಟಿ ಸಪ್ತಮಿ ಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರಕಾರದ ‘ಮೈತ್ರಿ ಮುಟ್ಟಿನ ಕಪ್’ (Maitri MUttina Cup Yojana) ಯೋಜನೆಯ ರಾಯಭಾರಿಯಾಗಿ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ನೇಮಕವಾಗಿದ್ದಾರೆ.

ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

ಯೋಜನೆಯ ಕುರಿತಂತೆ ಮಾತನಾಡಿದ ಸಪ್ತಮಿ ಗೌಡ,ಇಂದು ಸ್ತ್ರೀಯರು ಎಲ್ಲಾ ಕ್ಷೇತ್ರಗಲಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮುಟ್ಟಿನ ಕಾರಣಕ್ಕೆ ನಮ್ಮ ಸಹೋದರಿಯರು ಸಾಧನೆಯಲ್ಲಿ ಹಿಂದೆ ಬೀಳ ಬಾರದು. ಮುಟ್ಟಿನ ಕಪ್ ಇಂದು ನಮಗೆ ಹೊಸ ಭರವಸೆಯನ್ನು ಮೂಡಿಸಿದೆ. ಅದನ್ನು ಹೆಚ್ಚು ಹೆಚ್ಚು ಬಳಕೆ ಮಾಡುವ ಮೂಲಕ ಪರಿಸರ ಸ್ನೇಹಿಗಳಾಗಬೇಕು. ಹೆಣ್ಣು ಮಕ್ಕಳು ಸ್ಯಾನಿಟರಿ ಪ್ಯಾಡ್ ಬದಲಾಗಿ ಮುಟಿನ ಕಪ್ ಬಳಕೆಗೆ ಒಲವು ತೋರುತ್ತಿರುವ ಉತ್ತಮ ಬೆಳವಣಿಗೆಯಾಗಿದೆ ಎಂದು ಸಪ್ತಮಿ ಗೌಡ ಹೇಳಿದರು.

ಮೈತ್ರಿ ಯೋಜನೆಯ ರಾಯಬಾರಿಯಾಗಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು, ನಾನು ಕ್ರೀಡಾ ಪಟು. ಮುಟ್ಟಿನ ಕಪ್ ಬಳಕೆ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಆತ್ಮಸ್ಥೆರ್ಯವನ್ನು ಇಮ್ಮಡಿ ಮಾಡಿದೆ. ನನ್ನ ತಾಯಿಯೇ ಮುಟ್ಟಿನ ಕಪ್ ಬಳಕೆ ಮಾಡುವಂತೆ ಪ್ರೇರೇಪಿಸಿದರು. ಈ ಯೋಜನೆಯಲ್ಲಿ ತಾಯಂದಿರನ್ನು ಜಾಗೃತಿಗೊಳಿಸುವತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!