ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶಮಿತಾ ಶೆಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮತ್ತು ತಮ್ಮ ಆರೋಗ್ಯ ಸ್ಥಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಸ್ಪತ್ರೆಯ ಬೆಡ್ ಮೇಲೆ ಕುಳಿತು ವಿಡಿಯೋ ಒಂದನ್ನು ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ, ಎಲ್ಲ ಮಹಿಳೆಯರು ದಯವಿಟ್ಟು ಎಂಡೋಮೆಟ್ರಿಯಾಸಿಸ್ ಎಂದರೇನು ಎಂದು ತಿಳಿದುಕೊಳ್ಳಿ, ಶೇ 40 ಮಹಿಳೆಯರಿಗೆ ಈ ಸಮಸ್ಯೆ ಇರುತ್ತದೆ. ಎಂಡೋಮೆಟ್ರಿಯಾಸಿಸ್ ತೀವ್ರ ನೋವು ಉಂಟು ಮಾಡುವ, ಡಿಸ್ ಕಂಫರ್ಟ್ ಮಾಡುವ ವ್ಯಾದಿ.
ನಿಮ್ಮ ದೇಹದಲ್ಲಿ ಯಾವುದೇ ನೋವು ಕಾಣಿಸಿಕೊಂಡಾಗ ಅದನ್ನು ಗುರುತಿಸಿ ಅದರ ಮೂಲ ಹುಡುಕಿ, ದೇಹದ ಬಗ್ಗೆ ಧನಾತ್ಮಕವಾಗಿರಿ. ಎಷ್ಟೋ ಮಂದಿ ಮಹಿಳೆಯರಿಗೆ ಎಂಡೋಮೆಟ್ರಿಯಾಸಿಸ್ ಎಂದರೇನು ಎಂಬುದು ಸಹ ಗೊತ್ತಿಲ್ಲ. ಸಾಧ್ಯವಾದಷ್ಟು ಈ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದಿದ್ದಾರೆ.
ಎಂಡೋಮೆಟ್ರಿಯಾಸಿಸ್ ಲಕ್ಷಣಗಳೇನು?
ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ನೋವು, ಪಿರಿಯಡ್ಸ್ ಮುನ್ನ ಹಾಗೂ ಪಿರಿಯಡ್ಸ್ ನಂತರದ ದಿನಗಳಲ್ಲೂ ನೋವು.
ಸೆಕ್ಸ್ ವೇಳೆ ನೋವು, ಸೆಕ್ಸ್ ನಂತರವೂ ನೋವು ನಿಲ್ಲೋದಿಲ್ಲ.
ಮಲವಿಸರ್ಜನೆ ಹಾಗೂ ಯುರಿನ್ ವೇಳೆ ನೋವು
ಅತಿಯಾದ ರಕ್ತಸ್ರಾವ
ಮಕ್ಕಳಾಗದೇ ಇರುವುದು