Monday, October 27, 2025

ಫಾರೀನ್‌ನಲ್ಲಿ ಅತ್ತೆ-ಮಾವನ ಜೊತೆ ಇದ್ದಾರಂತೆ ನಟಿ ತಾಪ್ಸೀ ಪನ್ನು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ತಾಪ್ಸೀ ಪನ್ನು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಒಂದು ಆಸಕ್ತಿದಾಯಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ! ‘ಇದು ನಿಜಕ್ಕೂ ಅತಿ ಹೆಚ್ಚು ಭಾರತೀಯ ಸಂಸ್ಕೃತಿಯ ಸಂಗತಿ’ ಎಂದು ಅವರು ಹೇಳಿಕೊಂಡಿದ್ದಾರೆ. ನಟಿ ತಾಪ್ಸೀ ಡೆನ್ಮಾರ್ಕ್‌ನಲ್ಲಿ ತಮ್ಮ ಅತ್ತೆ-ಮಾವನ ಜೊತೆ ವಾಸವಿದ್ದಾರಂತೆ!

ಹೌದು, ಸಾಮಾನ್ಯವಾಗಿ ಬೇರೆ ದೇಶಗಳಲ್ಲಿ ಮದುವೆಯಾದ ನಂತರ ಮಕ್ಕಳು ಪೋಷಕರ ಜೊತೆ ಇರೋದಿಲ್ಲ. ಅವರು ಮತ್ತೊಂದು ಮನೆ ಮಾಡಿಕೊಂಡು ಇರುತ್ತಾರೆ. ಇದು ಭಾರತದಲ್ಲಿಯೂ ಕೆಲವು ಕಡೆ ಕಾಮನ್‌ ಆಗಿದೆ. ಆದರೆ ಹೆಚ್ಚಿನ ಜನರು ಈಗಲೂ ಅತ್ತೆ-ಮಾವ ಹಾಗೂ ಪತಿಯ ಜೊತೆ ವಾಸವಿದ್ದಾರೆ.

ತಾಪ್ಸಿ ಕೂಡ ಡೆನ್ಮಾರ್ಕ್‌ನಲ್ಲಿರುವ ಪತಿಯ ಮನೆಯಲ್ಲಿ ಇದ್ದಾರಂತೆ, ಎಲ್ಲರೂ ಕೂಡಿ ಇದ್ದೇವೆ ನನಗೆ ಯಾವ ಬೇಸರವೂ ಇಲ್ಲ, ಅತ್ತೆ ಮಾವ ಹಾಗೂ ಪತಿ ಜೊತೆ ಸಮಯ ಕಳೆಯೋದು ಇಷ್ಟ ಎಂದು ತಾಪ್ಸೀ ಹೇಳಿಕೊಂಡಿದ್ದಾರೆ.

error: Content is protected !!