ವಿಜಯ್ ನಟನೆಯ `ಲಿಯೋ’ ಸಿನಿಮಾದಿಂದ ನಟಿ ತ್ರಿಷಾ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ದಳಪತಿ ವಿಜಯ್ (Thalapathy Vijay) ನಟನೆಯ `ಲಿಯೋ’ (Leo) ಸಿನಿಮಾದಿಂದ ನಟಿ ತ್ರಿಷಾ (Thrisha) ಹೊರಬಂದಿದ್ದಾರೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.

ವಿಜಯ್ ಮತ್ತು ತ್ರಿಷಾ (Thrisha) ಜೋಡಿ ಮತ್ತೆ ಒಟ್ಟಿಗೆ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದರು.ಇದೀಗ ಈ ಚಿತ್ರದಿಂದ ಬಹುಭಾಷಾ ನಟಿ ತ್ರಿಷಾ (Actress Thrisha) ಗುಡ್ ಬೈ ಹೇಳಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kangaraj) ಅವರು ಈ ಸಿನಿಮಾಗೆ ನಿರ್ದೇಶನ ಮಾಡ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಮುಹೂರ್ತ ಕೂಡನೆರವೇರಿದೆ. ಈ ಚಿತ್ರದ ಶೂಟಿಂಗ್ ಸಲುವಾಗಿ ಕಾಶ್ಮೀರಕ್ಕೆ ತೆರಳಿದಾಗಲೂ ವಿಜಯ್- ತ್ರಿಷಾ ಜೊತೆಯಲ್ಲೇ ಇದ್ದರು. ಆದರೆ ಈಗ ತ್ರಿಷಾ ಅವರು ಏಕಾಏಕಿ ವಾಪಸ್ ಬಂದಿರುವುದೇಕೆ ಎಂದು ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ.

`ಲಿಯೋ’ ಸಿನಿಮಾ (Lio Film) ಟೀಮ್ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ತ್ರಿಷಾ ಅವರು ಕಾಶ್ಮೀರದಿಂದ ವಾಪಸ್ ಬಂದರು ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ ಅದರ ಅಸಲಿ ಕಾರಣ ಬೇರೆಯೇ ಇದೆ. ಕಾಶ್ಮೀರದಲ್ಲಿ ಈಗ ಸಿಕ್ಕಾಪಟ್ಟೆ ಚಳಿ ಇದೆ. ಅದು ತ್ರಿಷಾ ಅವರ ಆರೋಗ್ಯಕ್ಕೆ ಹೊಂದಿಕೆ ಆಗುತ್ತಿಲ್ಲ. ಅವರ ಪಾಲಿನ ದೃಶ್ಯಗಳ ಶೂಟಿಂಗ್‌ನಲ್ಲಿ ಭಾಗವಹಿಸಿದ ನಂತರ ಕಾಶ್ಮೀರದಲ್ಲಿಯೇ ಉಳಿದುಕೊಳ್ಳುವ ಬದಲು, ಅವರು ದೆಹಲಿಗೆ ಬಂದು ತಂಗಿದ್ದಾರೆ. ಮತ್ತೆ ಅಗತ್ಯವಿದ್ದಾಗ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!