ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರವಿಚಿತ್ರ ಬಟ್ಟೆ ಹಾಕೋದ್ರಲ್ಲಿ ಉರ್ಫಿ ಜಾವೇದ್ ಮೀರಿಸೋರಿಲ್ಲ ಅನ್ನೋದು ನೆಟ್ಟಿಗರ ಅಭಿಪ್ರಾಯ, ಇದೇ ಬಟ್ಟೆಯಿಂದ ಉರ್ಫಿ ಮತ್ತೆ ಸಂಕಷ್ಟಕ್ಕೀಡಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಪೊಲೀಸ್ ಉರ್ಫಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ವಿಡಿಯೋದಲ್ಲೇನಿದೆ?
ಸ್ಟಾರ್‌ಬಕ್ಸ್‌ನಲ್ಲಿ ಉರ್ಫಿ ನಿಂತಿದ್ದಾಗ ಇಬ್ಬರು ಮಹಿಳಾ ಪೊಲೀಸರು ಉರ್ಫಿಯನ್ನು ಕರೆಯುತ್ತಾರೆ, ಉರ್ಫಿ ಬಂದು ಏನು ವಿಷಯ ಎಂದು ವಿಚಾರಿಸ್ತಾರೆ, ಆಗ ನೀವು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಚಿಕ್ಕ ಚಿಕ್ಕ ಬಟ್ಟೆ ಹಾಕುವಂತಿಲ್ಲ ಎಂದು ಪೊಲೀಸ್ ಹೇಳುತ್ತಾರೆ. ಅದಕ್ಕೆ ಉರ್ಫಿ ಬಟ್ಟೆ ನನ್ನಿಷ್ಟ, ಅದನ್ನೆಲ್ಲಾ ಯಾಕೆ ಕೇಳ್ತೀರಿ ಎಂದಿದ್ದಾರೆ. ಹೆಚ್ಚಿಗೆ ಮಾತಾಡೋದು ಬೇಡ ವ್ಯಾನ್ ಹತ್ತಿ ಎಂದು ಪೊಲೀಸರು ಹೇಳಿದ್ದು, ಉರ್ಫಿ ನಿರಾಕರಿಸ್ತಾರೆ. ಮತ್ತೊಮ್ಮೆ ಪೊಲೀಸ್ ಸ್ಟೇಷನ್‌ನಲ್ಲಿ ಮಾತನಾಡಿ ಎಂದು ಕೈ ಹಿಡಿದು ಎಳೆದು ವ್ಯಾನ್ ಹತ್ತಿಸಿದ್ದಾರೆ.
ಇದೆಲ್ಲಾ ಯಾವುದಾದರೂ ಪ್ರಚಾರದ ಗಿಮಿಕ್ ಅಥವಾ ನಿಜವಾಗ್ಯೂ ಉರ್ಫಿ ಅರೆಸ್ಟ್ ಆದ್ರಾ? ಕಾದುನೋಡಬೇಕಿದೆ..
Omg😱 Mumbai Police takes @uorfi_ into custody🚔👮♀️
.
.#zoomtv #zoompapz #urfi #urfijaved #uorfijaved #fashionista #celebrityfashion #mumbaipolice #policearrest #fyp #trending #exclusive pic.twitter.com/n23zHMEEm7— @zoomtv (@ZoomTV) November 3, 2023