ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಹಾಗೂ ಕನ್ನಡ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸಿರುವ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ಎಂಗೇಜ್ ಆಗಿದ್ದಾರೆ.
ನಿನ್ನೆ ಅದ್ಧೂರಿ ಎಂಗೇಜ್‌ಮೆಂಟ್ ಸೆರಮೊನಿ ನಡೆದಿದ್ದು, ಅಭಿಮಾನಿಗಳು ಯುವ ಜೋಡಿಗೆ ಶುಭ ಕೋರಿದ್ದಾರೆ. ಉದ್ಯಮಿ ಅಕಾಯ್ ಎನ್ನುವವರ ಜೊತೆ ವೈಷ್ಣವಿ ಎಂಗೇಜ್ ಆಗಿದ್ದಾರೆ.
ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗನ ಹೆಸರು ಅಕಾಯ್ ಎಂದು. ಅವರು ತಮ್ಮದೇ ಆದ ಉದ್ಯಮ ಹೊಂದಿದ್ದಾರೆ ಎನ್ನಲಾಗಿದೆ. ಈ ಮೂಲಕ ವೈಷ್ಣವಿ ಅವರು ಬಣ್ಣದ ಲೋಕದವರನ್ನು ಬಿಟ್ಟು ಹೊರಗಿನವರನ್ನು ಕೈ ಹಿಡಿಯುತ್ತಿದ್ದಾರೆ.