ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು-ತೆಲುಗು ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರು ತಮ್ಮ ಮದುವೆಯ ಆಮಂತ್ರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ.
ಭಾವಿ ಪತಿ ನಿಕೋಲಾಯ್ ಜತೆ ವರಲಕ್ಷ್ಮಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ವರಲಕ್ಷ್ಮಿ ಅವರು ಪ್ರಧಾನಿ ಮೋದಿಯವರೊಂದಿಗಿನ ಭೇಟಿಯ ಸೆಲ್ಫಿ ಸೇರಿದಂತೆ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
‘ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರನ್ನು ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದೆವು. ಅವರನ್ನು ಆಹ್ವಾನಿಸಿದ್ದು ನಮ್ಮ ಭಾಗ್ಯ. ನಿಮ್ಮ ಬ್ಯುಸಿ ಶೆಡ್ಯೂಲ್‌ನ ಹೊರತಾಗಿಯೂ ನಮ್ಮೊಂದಿಗೆ ಸಮಯ ಕಳೆದಿದ್ದೀರಿ. ನಿಜವಾಗಿಯೂ ಗೌರವ ಇದುʼʼಎಂದು ಬರೆದುಕೊಂಡಿದ್ದಾರೆ.
ವರಲಕ್ಷ್ಮಿ ಶರತ್‌ಕುಮಾರ್ ಜತೆ ತಂದೆ ಶರತ್‌ಕುಮಾರ್, ತಾಯಿ ಮತ್ತು ಸಹೋದರಿ ಸೇರಿ ಇಡೀ ಕುಟುಂಬವೇ ಜತೆಗೆ ಇತ್ತು. ಬಹುಭಾಷಾ ನಟ ಶರತ್‌ಕುಮಾರ್ ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದರು. ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್ ಆಗಿದ್ದರು. ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜುಲೈ 2ರಂದು ಜೋಡಿ ವಿವಾಹವಾಗಲಿದೆ.