ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ವಿಜಯಲಕ್ಷ್ಮಿ ಅವರು ರಾಜಕಾರಣಿ, ನಟ, ನಿರ್ದೇಶಕ ಸೀಮನ್ ವಿರುದ್ಧ ಏಳು ಬಾರಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪವನ್ನು ಹೊರಿಸಿದ್ದು, ಲೈಂಗಿಕ ದೌರ್ಜನ್ಯದ ಆರೋಪ ಮಾಡಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೀಗ ಸೀಮನ್ ಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದಾರೆ.
ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಸೀಮನ್ ಅವರಿಗೆ ಸೂಚಿಸಲಾಗಿದ್ದರೂ, ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ನಾಮ್ ತಮಿಳರ್ ಕಚ್ಚಿ ನಾಯಕ, ನಟ-ನಿರ್ದೇಶಕ ಸೀಮನ್ ಅವರು ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ್ದಾರೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಆತ ದೈಹಿಕವಾಗಿ ಸಂಪರ್ಕ ಬೆಳೆಸಿದ್ದಾರೆ. ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ಆರೋಪಿಸಿ ಸೀಮನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು.
ವರ್ಷಗಳು ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಾರಿ ನಾನು ಪೊಲೀಸ್ ಮತ್ತು ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದೇನೆ. ಹಿಂದಿನ ಸರ್ಕಾರವು ಒಂದೇ ಒಂದು ತನಿಖೆಯನ್ನು ನಡೆಸಲಿಲ್ಲ ಎಂದು ನಟಿ ವಿಜಯಲಕ್ಷ್ಮಿ ಆರೋಪ ಮಾಡಿದ್ದರು.