BIG NEWS | ಗಾಯದ ಮೇಲೆ ಬರೆ, ನಂದಿನಿ ಹಾಲಿದ ದರ ಮತ್ತೆ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಹಣ್ಣು, ತರಕಾರಿ, ಗ್ಯಾಸ್‌ ಇನ್ನಿತರ ದಿನಬಳಕೆ ವಸ್ತುಗಳ ಹಣ ದುಬಾರಿಯಾಗುತ್ತಲೇ ಇದ್ದು, ಇದೀಗ ಹಾಲಿನ ದರವೂ ಹೆಚ್ಚಾಗಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಹಾಲಿನ ದರ ಹೆಚ್ಚಿಸಿದೆ. ಪ್ರತಿ ಲೀಟರ್‌ ಹಾಲಿನ ದರ 2.10 ರೂ. ಹೆಚ್ಚಿಸಿದೆ ಎಂದು ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್‌ ಹಾಲಿನ ದರವನ್ನ 2.10 ರೂ. ಹಾಗೂ ಅರ್ಧ ಲೀಟರ್‌ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ.

1050 ಮಿ.ಲೀ ಹಾಲಿಗೆ 50 ಮಿಲೀ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಲೀಟರ್‌ಗೆ 44 ರೂ ಇರುವ ಒಂದು ಲೀ ಹಾಲಿನ ಬೆಲೆಯು ಬುಧವಾರದಿಂದ 46 ರೂ ಆಗಲಿದೆ. ಹಾಗೆಯೇ 22 ರೂ. ದರವಿರುವ 550 ಮಿ.ಲೀ ಪ್ಯಾಕೆಟ್ ಹಾಲು, 24 ರೂ.ಗೆ ಮಾರಾಟವಾಗಲಿದೆ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!