ಹೊಸದಿಗಂತ ವರದಿ ಶಿರಸಿ:
ಪ್ರಕರಣವೊಂದರಲ್ಲಿ 6 ಸಾವಿರ ಲಂಚ ಪಡೆಯುತ್ತಿರುವಾಗ ಶಿರಸಿ ನ್ಯಾಯಾಲಯದ ಎಪಿಪಿ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಶಿರಸಿ ನ್ಯಾಯಾಲಯದಲ್ಲಿ ಹೆಚ್ಚುವರಿ ಎಪಿಪಿಯಾಗಿದ್ದ ಪ್ರಕಾಶ ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದವರು.
ಲೋಕಾಯುಕ್ತ ಇನ್ಸಪೆಕ್ಟರ್ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ದಾಳಿ ನಡೆದ್ದು, ಲಂಚ ಪಡೆಯುವಾಗಲೇ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿದ್ದಾರೆ. ಬದನಗೋಡದ ಪವನಕುಮಾರ ಎಂಬುವವರಿಂದ ಹಣ ಕೇಳಿದ್ದ ಎಪಿಪಿ ಪ್ರಕಾಶ ಲಮಾಣಿ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.
ಎರಡು ವಸ್ತುಗಳ ಕಳವು ಪ್ರಕರಣದಲ್ಲಿ ಏಳು ಸಾವಿರ ರೂ. ಮೌಲ್ಯದ ವಸ್ತುಗಳು ನ್ಯಾಯಾಲಯಕ್ಕೆ ರಿಕವರಿ ಆಗಿದ್ದು, ಅದನ್ನು ಬಿಡಿಸಿಕೊಡಲು ಎಪಿಪಿ ಪ್ರಕಾಶ್ 6000 ರೂ. ಲಂಚ ಕೇಳಿದ್ದರು ಎನ್ನಲಾಗಿದೆ. ಈ ಹಿಂದೆ ಇದಕ್ಕೆ ಸಂಬಂಧಪಟ್ಟಂತೆ ತಮ್ಮ ಹೆಂಡತಿ ಅಕೌಂಟಿಗೆ 500 ರೂ. ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದರು. ಈ ಕುರಿತು ಗುರುವಾರ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಲಂಚ ಪಡೆಯುವಾಗ ಹಿಡಿಯುವ ಇದ್ದೇಶದಿಂದ ಶುಕ್ರವಾತ 6000 ರೂ. ಲಂಚ ಪಡೆಯುವಾಗ ಎಪಿಪಿ ಪ್ರಕಾಶ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಕುರಿತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.