ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲರಾಮನ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನ ಜನರು ಶ್ರೀರಾಮನ ದರ್ಶನಕ್ಕೆ ಸಿದ್ಧರಾಗಿದ್ದಾರೆ. ಹೀಗಾಗಿ ಅಯೋಧ್ಯೆಗೆ ಹೆಚ್ಚುವರಿ ರೈಲು ಸೇವೆ ಒದಗಿಸಲು ಇಲಾಖೆ ನಿರ್ಧರಿಸಿದೆ.
ಹೌದು, ರೈಲಿನಲ್ಲಿ ಅಯೋಧ್ಯೆಗೆ ಪ್ರಯಾಣಿಸುವವರು ಈಗಾಗಲೇ ಟಿಕೆಟ್ ಬುಕ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೌತ್ ವೆಸ್ಟರ್ನ್ ರೀಜನಲ್ ರೈಲ್ವೇ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲು ಚಿಂತಿಸುತ್ತಿದೆ.
1) ಯಶವಂತಪುರ – ಗೋರಖ್‌ಪುರ 15024
ಗುರುವಾರ ಯಶವಂತಪುರದಿಂದ 23:40ಕ್ಕೆ ಸಂಚಾರ (11.40ಕ್ಕೆ)
ತಲುಪುವುದು – 16:24 ಗಂಟೆಗೆ, ಶನಿವಾರ ಅಯೋಧ್ಯಧಾಮ (4.24ಕ್ಕೆ)
2) ಯಶವಂತಪುರ – ಲಕ್ನೋ ಎಕ್ಸ್‌ಪ್ರೆಸ್ 12539
ಬುಧವಾರ ಯಶವಂತಪುರದಿಂದ 13:30ಕ್ಕೆ (1.30ಕ್ಕೆ)
ತಲುಪುವುದು – 10:35ಕ್ಕೆ ಶುಕ್ರವಾರ
3) ಯಶವಂತಪುರ – ಲಕ್ನೋ ಎಕ್ಸ್‌ಪ್ರೆಸ್ 22683
ಸೋಮವಾರ – ಯಶವಂತಪುರದಿಂದ – 23:40ಕ್ಕೆ (11.40ಕ್ಕೆ)
ತಲುಪುವುದು – ಲಕ್ನೋ – ಬುಧವಾರ 18:10 ಬಾದ್ ಶಾ ನಗರ ರೈಲು ನಿಲ್ದಾಣ (6.10ಕ್ಕೆ)
4) ಯಶವಂತಪುರ – ಗೋರಖ್‌ಪುರ 12592
ಯಶವಂತಪುರ : ಸೋಮವಾರ :17:05ಕ್ಕೆ ಸಂಚಾರ ಆರಂಭ (5.05ಕ್ಕೆ)
ತಲುಪುವುದು – ಬುಧುವಾರ 10:10ಕ್ಕೆ ಬಾದ್‌ಶಾ ನಗರ ನಿಲ್ದಾಣ
5) ಯಶವಂತಪುರ- ಗೋರಖ್‌ಪುರ 22534
ಬುಧವಾರ : 23:40ಕ್ಕೆ ಸಂಚಾರ ಆರಂಭ (11.40)
ತಲುಪುವುದು – ಶುಕ್ರವಾರ 13:45ಕ್ಕೆ ಬಾದ್‌ಶಾ ನಗರ ನಿಲ್ದಾಣ (1.45ಕ್ಕೆ)
ಕಳೆದ ವಾರದಿಂದ ಅಯೋಧ್ಯೆಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚುವರಿ ರೈಲು ಸೇವೆಗಳಿಗೂ ಪ್ರಯಾಣಿಕರು ಮನವಿ ಮಾಡಿದ್ದಾರೆ. ಹೀಗಾಗಿ ಬೆಂಗಳೂರು, ಮೈಸೂರು ಸೇರಿ ಕೆಲ ಭಾಗಗಳಿಂದಲೂ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ನೈಋತ್ಯ ವಲಯದ ರೈಲ್ವೆ ಅಧಿಕಾರಿಗಳು ಹೆಚ್ಚುವರಿ ರೈಲುಗಳನ್ನು ಓಡಿಸಲು ಸಿದ್ಧತೆ ನಡೆಸಿದ್ದಾರೆ.