ಶಾಸಕ ಜಯಚಂದ್ರನಿಗೆ ಸೂಕ್ತ ಭದ್ರತೆ: ಎಚ್.ಕೆ. ಪಾಟೀಲ

ಹೊಸದಿಗಂತ ವರದಿ ಹುಬ್ಬಳ್ಳಿ:

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಶಾಸಕ ಟಿ.ಬಿ. ಜಯಚಂದ್ರ ಅವರು ನೈಸ್ ಯೋಜನೆಯ ಕುರಿತು ವರದಿ ಸಲ್ಲಿಸಿದ್ದಾರೆ. ಅದನ್ನು ಸಹಿಸದಾಗದವರು ಬೆದರಿಕೆ ಕರೆ ಮಾಡಿದ್ದು, ಸರ್ಕಾರ ಅವರಿಗೆ ಸೂಕ್ತ ಭದ್ರತೆ ನೀಡಲಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಟಿ.ಬಿ. ಜಯಚಂದ್ರ ಅವರು ನೈಸ್ ಸಂಸ್ಥೆಗೆ ಸಂಬಂಸಿ ದಿಟ್ಟತನದ ವರದಿ ನೀಡಿದ್ದರಿಂದ, ಅವರಿಗೆ ಬೆದರಿಕೆ ಕರೆ ಬಂದಿರಬಹುದು. ಇದು ಮಾಧ್ಯಮದಿಂದ ತಿಳಿದು ಬಂದಿದೆ. ಆದರೆ, ಅವರು ಅದ್ಯಾವುದಕ್ಕೂ ಹೆದರುವ, ಅಂಜುವ ಹಾಗೂ ಅಳಕವೂ ವ್ಯಕ್ತಿಯಲ್ಲ ಎಂದರು.

ಇತ್ತೀಚೆಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಪತ್ರದ ಬಗ್ಗೆ ಚರ್ಚೆಯಾಗಿದೆ.
ಅದು ಸದ್ಯ ಮುಗಿದ ಅಧ್ಯಾಯ. ನಮ್ಮ ನಾಯಕ ರಾಹುಲ್ ಗಾಂ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಕರೆದ ಸಭೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಎರಡು ಬಾರಿ ಸಭೆ ಕರೆದಿದ್ದು, ಅನಿವಾರ್ಯ ಕಾರ್ಣದಿಂದ ಮುಂದೂಡಲಾಗಿತ್ತು ಎಂದು ತಿಳಿಸಿದರು.

ಈ ಸಭೆಯಲ್ಲಿ ಲೋಕ ಸಭಾ ಚುನಾವಣಾ ತಯಾರಿ, ರಾಜ್ಯದ ಅಭಿವೃದ್ಧಿಗೆ ಯಾವೆಲ್ಲ ಯೋಜನೆ ಹಾಕಿಕೊಳ್ಳಬೇಕು, ಪಕ್ಷ ಸಂಘಟನೆಯನ್ನು ಹೇಗೆ ಇನ್ನಷ್ಟು ಬಲಿಷ್ಠಗೊಳಿಸಬೇಕು ಎನ್ನುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಸಂಸ್ಥೆಗೆ ಆನೆ ಬಲ ಬಂದಿದೆ. ಯಾತ್ರಾ ಮತ್ತು ಪ್ರವಾಸಿ ಸ್ಥಳಗಳು ಭರ್ತಿಯಾಗುತ್ತಿವೆ. ಇವನ್ನು ಗಮನಿಸಿದರೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿವೆ. ಆದರಿಂದ ಸರ್ಕಾರ
ಪ್ರವಾಸೋದ್ಯಮ ಇಲಾಖೆಗೆ ಹೊಸ ರೂಪ ಕೊಡುವ ಪ್ರಯತ್ನ ನಡೆಯುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಕೆಲ ದಿನಗಳ ಹಿಂದೆ 300 ಕೋಟಿ ರೂ. ವೆಚ್ಚದ ಹೂಡಿಕೆ ಯೋಜನೆಗೆ ಅನುಮತಿ ನೀಡಲಾಗಿದೆ. ಪ್ರವಾಸಿ ಸ್ಥಳಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಉಡುಪಿ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ನಿರ್ಣಯಕೈಗೊಳ್ಳುತ್ತಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!