ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೋ ಕೈಗೊಂಡ ಚಂದ್ರಯಾನ 3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಆದಿಪುರುಷ್ ಸಿನಿಮಾ ಮತ್ತೊಮ್ಮೆ ಟ್ರೋಲ್‌ಗೆ ಗುರಿಯಾಗಿದೆ. ಚಂದ್ರಯಾನ ವಿಜಯದಿಂದ ಇಸ್ರೋಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಅದರ ಜೊತೆಗೆ ನಿರ್ದೇಶಕ ಓಂ ರಾವುತ್ ಟೀಕೆಗೆ ಒಳಗಾಗಿದ್ದಾರೆ.
ಚಂದ್ರಯಾನಕ್ಕೂ ಆದಿಪುರುಷಕ್ಕೂ ಏನು ಸಂಬಂಧ ಎಂದು ಪ್ರಶ್ನೆ ಮೂಡುತ್ತಿದ್ಯಾ? ಈ ಎರಡು ಬಜೆಟ್‌ಗಳನ್ನು ಹೋಲಿಸಿ ಪೋಸ್ಟ್ ಮಾಡಲಾಗಿದೆ. ಚಿತ್ರತಂಡದ ಪ್ರಕಾರ, ಆದಿಪುರುಷ ಚಿತ್ರದ ಬಜೆಟ್ ಮೊದಲು 500 ಕೋಟಿ ಎಂದು ಘೋಷಿಸಿ ನಂತರ 600 ಕೋಟಿ ಆಯಿತು. ಆದರೆ ಟೀಸರ್ ಬಿಡುಗಡೆಯಾದ ನಂತರ ಚಿತ್ರದ ಮೇಲೆ ಟ್ರೋಲ್‌ಗಳು ಬಂದಿದ್ದು, ಮತ್ತೆ ವಿಎಫ್‌ಎಕ್ಸ್ ಮಾಡಲು ಇನ್ನೂ 100 ಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.
ಬಾಲಿವುಡ್ ಟಾಕ್ ಪ್ರಕಾರ ಆದಿಪುರುಷ ಚಿತ್ರದ ಬಜೆಟ್ ಸುಮಾರು 700 ಕೋಟಿ. ಭಾರತದ ಹೆಮ್ಮೆಯ ಚಂದ್ರಯಾನದ ಬಜೆಟ್ 615 ಕೋಟಿ. ಇವೆರಡರ ಬಜೆಟ್ ಅನ್ನು ಹೋಲಿಸಿ ನೋಡಿದರೆ ಇಸ್ರೋ 615 ಕೋಟಿ ಖರ್ಚು ಮಾಡಿ ಚಂದ್ರಲೋಕಕ್ಕೆ ಹೋಗಿ ಯಶಸ್ಸು ಸಾಧಿಸಿ ದೇಶದ ಹೆಸರನ್ನು ಎತ್ತಿ ಹಿಡಿದಿದೆ. 700 ಕೋಟಿ ಖರ್ಚು ಮಾಡಿದರೂ ಆದಿಪುರುಷ ಪ್ರೇಕ್ಷಕರನ್ನು ಮೆಚ್ಚಿಸಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಆದಿಪುರುಷ ಸಿನಿಮಾ ರಿಲೀಸ್ ಆದಾಗ ನಿರ್ದೇಶಕ ಓಂ ರಾವತ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು, ಇದೀಗ ಮತ್ತೊಮ್ಮೆ ಓಂ ರಾವತ್ ಅವರನ್ನು ಟ್ರೋಲ್‌ಗೆ ಗುರಿಯಾಗಿದ್ದಾರೆ. ನಿನ್ನೆಯಿಂದ ಚಂದ್ರಯಾನ 3 ಜೊತೆಗೆ ಆದಿಪುರುಷ ಮತ್ತು ಓಂ ರಾವುತ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿವೆ.