ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರ ತೆರೆಕಂಡಿರುವುದು ಗೊತ್ತೇ ಇದೆ. ಮೊದಲಿನಿಂದಲೂ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿತ್ತು, ಆದರೆ ಬಿಡುಗಡೆಯಾದ ನಂತರ ಎಲ್ಲವೂ ತಲೆಕೆಳಗಾಗಿತ್ತು. ಪಾತ್ರಗಳನ್ನು ಬದಲಾಯಿಸಲಾಗಿದೆ, ರಾಮಾಯಣವು ಎಲ್ಲಿಯೂ ತೋರಿಸಿಲ್ಲ, ಡೈಲಾಗ್ಸ್ ಸರಿಯಾಗಿ ಬರೆದಿಲ್ಲ, ವಿಎಫ್ ಎಕ್ಸ್ ಕೂಡ ಕೆಟ್ಟಿದೆ ಎಂಬ ಟೀಕೆಗಳು ಬರುತ್ತಿವೆ. ಪ್ರಭಾಸ್ ಅಭಿಮಾನಿಗಳು, ಪ್ರೇಕ್ಷಕರು ಮತ್ತು ನೆಟ್ಟಿಗರು ಆದಿಪುರುಷ ಚಿತ್ರ ಮತ್ತು ನಿರ್ದೇಶಕ ಓಂ ರಾವತ್ ಅನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಹನುಮಂತನ ಡೈಲಾಗ್‌ಗಳಿಗೆ ವಿವಾದ ಹುಟ್ಟಿಕೊಂಡಿದೆ. ಮೇಲಾಗಿ ಆದಿಪುರುಷ ಚಿತ್ರದ ಬರಹಗಾರ ಮನೋಜ್ ಮುಂತಾಶಿರ್ ಇದಕ್ಕೆ ಬೆಂಬಲ ನೀಡಿದ್ದು, ಅವರ ಮೇಲೆ ಇನ್ನಷ್ಟು ಕಿಡಿಕಾರಿದ್ದಾರೆ. ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆದಿಪುರುಷನ ಟ್ರೋಲ್ ಗಳು ತುಂಬಿಕೊಂಡಿವೆ. ಹನುಮಂತನ ಡೈಲಾಗ್‌ಗಳಿಗೆ ಉತ್ತರದಲ್ಲಿ ದೊಡ್ಡ ವಿವಾದವೇ ಎದ್ದಿದೆ. ಸಿನಿಮಾ ಟೀಕೆಗೆ ಗುರಿಯಾಗುತ್ತಿದ್ದಂತೆ ಬರಹಗಾರ ಮನೋಜ್ ಮಾತು ಬದಲಿಸಿದ್ದಾರೆ.
ಇತ್ತೀಚೆಗಷ್ಟೇ ಮನೋಜ್ ಮುಂತಾಶಿರ್ ಸಂದರ್ಶನವೊಂದರಲ್ಲಿ ಆದಿಪುರುಷನ ಮೇಲಿನ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸುತ್ತಾ.. ನಾವು ರಾಮಾಯಣವನ್ನು ತೆಗೆದುಕೊಂಡಿಲ್ಲ, ನಾವು ರಾಮಾಯಣವನ್ನು ಆಧಾರವಾಗಿ ತೆಗೆದುಕೊಂಡಿದ್ದೇವೆ ಮತ್ತು ಅದರಿಂದ ಹೆಚ್ಚಿನ ಸ್ಫೂರ್ತಿ ಪಡೆದು ಬರೆದಿದ್ದೇವೆ ಎಂದರು.
ಇದು ಮನೋಜ್ ಮೇಲೆ ಇನ್ನಷ್ಟು ಟೀಕೆಗೆ ಕಾರಣವಾಯಿತು. ಇಷ್ಟು ವರ್ಷ ರಾಮಾಯಣ ಎಂದು ಪ್ರಚಾರ ಮಾಡಿ ಈಗ ಉಲ್ಟಾ ಹೊಡೆದಿದ್ದಾರೆ ಎಂದು ಪ್ರೇಕ್ಷಕರು ಮನೋಜ್ ಮೇಲೆ ಫೈರ್ ಅಗುತ್ತಿದ್ದಾರೆ. ಪ್ರೇಕ್ಷಕರನ್ನು ಹುಚ್ಚರು ಅಂದುಕೊಂಡಿದ್ದೀರಾ ಎಂದು ಕಿಡಿ ಕಾರುತ್ತಿದ್ದಾರೆ.