CINE| ʻಆದಿಪುರುಷ್‌ʼನಿಂದಾಗಿ ಈ ದೇಶದಲ್ಲಿ ಎಲ್ಲಾ ಭಾರತೀಯ ಸಿನಿಮಾಗಳು ಬ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಓಂ ರಾವುತ್ ನಿರ್ದೇಶನದ ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರ ಬಿಡುಗಡೆಯಾದಾಗಿನಿಂದ ವಿವಾದಗಳ ಗೂಡಾಗಿದೆ.  ಮೊದಲಿನಿಂದಲೂ ರಾಮಾಯಣ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಚಿತ್ರ ಇದೀಗ ಮೂಲ ರಾಮಾಯಣದಿಂದ ಪಾತ್ರಗಳ ರೂಪವನ್ನೇ ಬದಲಿಸಿದೆ. ಟ್ರೋಲ್‌ಗಳಿಂದಾಗಿ, ರಾಮಾಯಣವನ್ನು ನಾವು ಮಾಡಿಲ್ಲ ಎಂದು ಹೇಳುತ್ತಾ, ಡೈಲಾಗ್‌ಗಳ ವಿವಾದದಿಂದ ಕೂಡಿದೆ.

ಈ ವಿವಾದ ಇಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಇದೆ. ವಿಶೇಷವಾಗಿ ನೇಪಾಳದಲ್ಲಿ. ನೇಪಾಳ ಸಂಪೂರ್ಣ ಹಿಂದೂ ರಾಷ್ಟ್ರ. ಅದರಲ್ಲೂ ಸೀತಾದೇವಿ ನೇಪಾಳದಲ್ಲಿ ಹುಟ್ಟಿದ್ದರಿಂದ ಭಕ್ತಿ ಹೆಚ್ಚು. ನೇಪಾಳದಲ್ಲಿ ಅತಿ ದೊಡ್ಡ ಸೀತಾದೇವಿ ದೇವಸ್ಥಾನವಿದೆ. ಆದರೆ, ಆದಿಪುರುಷ ಚಿತ್ರದಲ್ಲಿ ಸೀತಾದೇವಿಯನ್ನು ಭಾರತಕ್ಕೆ ಸಂಬಂಧಿಸಿದ ವ್ಯಕ್ತಿಯಾಗಿ ತೋರಿಸಲಾಗಿದ್ದು, ಡೈಲಾಗ್ ಗಳು ಹಾಗೆಯೇ ಉಳಿದಿದ್ದು ನೇಪಾಳದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಹಾಗಾಗಿ ಮೂರು ದಿನಗಳ ಕಾಲಾವಕಾಶ ನೀಡಿ ಡೈಲಾಗ್‌ ಬದಲಾಯಿಸದಿದ್ದರೆ, ಸಿನಿಮಾ ಬ್ಯಾನ್‌ ಮಾಡುವುದಾಗಿ ಹೇಳಿತ್ತು.

ಇದಕ್ಕೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಕಠ್ಮಂಡು ಮೇಯರ್ ಬಲೇನ್ ಶಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.. ಸೀತಾ ಜನ್ಮಸ್ಥಳಕ್ಕೆ ಸಂಬಂಧಿಸಿದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಲು ಅಥವಾ ಬದಲಾಯಿಸಲು ಮೂರು ದಿನಗಳ ಹಿಂದೆಯೇ ಚಿತ್ರತಂಡಕ್ಕೆ ಹೇಳಿದ್ದೆವು. ಅವರು ಇನ್ನೂ ಪ್ರತಿಕ್ರಿಯಿಸಿಲ್ಲ. ನೇಪಾಳದ ಸ್ವಾಭಿಮಾನವನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಹಾಗಾಗಿಯೇ ನೇಪಾಳದ ಕಠ್ಮಂಡುವಿನಲ್ಲಿ ಆದಿಪುರುಷ ಚಿತ್ರವನ್ನು ಬ್ಯಾನ್ ಮಾಡುತ್ತಿದ್ದೇವೆ. ಆ ಸಿನಿಮಾ ಮಾತ್ರವಲ್ಲ, ಕಠ್ಮಂಡುವಿನಲ್ಲಿ ಯಾವುದೇ ಭಾರತೀಯ ಚಲನಚಿತ್ರ ಬಿಡುಗಡೆಯಾಗುವುದಿಲ್ಲ. ನೇಪಾಳದ ಸಂವಿಧಾನದ ವಿವಿಧ ವಿಭಾಗಗಳ ಅಡಿಯಲ್ಲಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನೇಪಾಳದ ಇತರ ಭಾಗಗಳ ನಾಯಕರೊಂದಿಗೂ ಮಾತನಾಡಿ ಇಲ್ಲಿ ಆದಿಪುರುಷ ಚಿತ್ರವನ್ನು ರದ್ದು ಮಾಡುವುದಾಗಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ.

ಆದಿಪುರುಷ್‌ನಿಂದಾಗಿ ನೇಪಾಳದ ರಾಜಧಾನಿಯಲ್ಲಿ ಎಲ್ಲಾ ಭಾರತೀಯ ಚಲನಚಿತ್ರಗಳನ್ನು ನಿಷೇಧಿಸಲಾಗಿದೆ ಎಂಬುದು ದೊಡ್ಡ ಹೊಡೆತವಾಗಿದೆ. ನೇಪಾಳದಲ್ಲಿ ಅನೇಕ ಹಿಂದಿ ಚಲನಚಿತ್ರಗಳು ನಿಯಮಿತವಾಗಿ ಪ್ರದರ್ಶನಗೊಳ್ಳುತ್ತವೆ. ಕಠ್ಮಂಡು ಮತ್ತು ನೇಪಾಳದ ಎಲ್ಲಾ ನಗರಗಳು ಇದೇ ನಿರ್ಧಾರ ತೆಗೆದುಕೊಂಡರೆ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದಕ್ಕೆ ಆದಿಪುರುಷ ಚಿತ್ರತಂಡ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!