ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಂ ರಾವುತ್ ನಿರ್ದೇಶನದಲ್ಲಿ, ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್ ಮತ್ತು ರಾವಣನಾಗಿ ಸೈಫ್ ಅಲಿಖಾನ್, ಆದಿಪುರುಷ ಜೂನ್ 16 ರಂದು ಬಿಡುಗಡೆಯಾಗಲಿದೆ. ಇಂದು ಜೂನ್ 6 ರಂದು ತಿರುಪತಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯದಲ್ಲಿ ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದಿಪುರುಷ ಪ್ರೀ ರಿಲೀಸ್ ಈವೆಂಟ್‌ಗೆ ಚೀನಾಜೀಯರ್ ಸ್ವಾಮಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರದ ವೇಗ ಹೆಚ್ಚಿಸಿದೆ. ಅಲ್ಲದೇ ಸಿನಿಮಾವನ್ನು ಸಂಪೂರ್ಣವಾಗಿ ಆಧ್ಯಾತ್ಮಿಕವಾಗಿ ಜೈ ಶ್ರೀರಾಮ್ ಎಂದು ಪ್ರಚಾರ ಮಾಡಿ ಸಾರ್ವಜನಿಕರ ಬಳಿ ಕೊಂಡೊಯ್ಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಮಾಣ ಸಂಸ್ಥೆ ಹೊಸ ನಿರ್ಧಾರ ಕೈಗೊಂಡಿದೆ.
ರಾಮಾಯಣ ಪಠಿಸಿದಲ್ಲೆಲ್ಲಾ ಭಗವಾನ್ ಹನುಮಂತನು ಕಾಣಿಸಿಕೊಳ್ಳುತ್ತಾನೆ ಎಂಬುದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗೌರವಿಸಿ, ಪ್ರಭಾಸ್‌ನ ಆದಿಪುರುಷ ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್‌ನಲ್ಲಿ ಹನುಮಂತನಿಗೆ ಒಂದು ಸೀಟನ್ನು ಮಾರಾಟ ಮಾಡದೆ ಕಾಯ್ದಿರಿಸಲಾಗುತ್ತದೆ. ಇತಿಹಾಸದಲ್ಲಿ ಎಂದೂ ಕಾಣದ ರಾಮನ ಮಹಾ ಭಕ್ತನಿಗೆ ನಮನಗಳು ಹೀಗಾಗಿ ಈ ಮಹತ್ತರ ಕಾರ್ಯಕ್ರಮ ಆರಂಭಿಸಿದ್ದೇವೆ. ಪ್ರತಿ ಥಿಯೇಟರ್ ನಲ್ಲೂ ಹನುಮಂತನಿಗೆ ಒಂದು ಸೀಟು ಮೀಸಲಿಟ್ಟು ತಮ್ಮ ಭಕ್ತಿಯನ್ನು ತೋರಿಸುತ್ತಿದ್ದರೆ ಇನ್ನೊಂದೆಡೆ ಪ್ರಚಾರವನ್ನೂ ಮಾಡುತ್ತಿದ್ದಾರೆ.