ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿಪುರುಷ್ ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ಟ್ರೋಲ್ಸ್ ಹಾಗೂ ಮೀಮ್ಸ್‌ಗಳನ್ನು ಎದುರಿಸಿತ್ತು.
ರಾಮಾಯಣದ ಕಥೆಯನ್ನೇ ಇಲ್ಲಿ ತಿರುಚಲಾಗಿದ್ದು, ಸೆಲೆಬ್ರಿಟೀಸ್ ಕೂಡ ನಿರ್ದೇಶಕ ಓಂ ರಾವತ್ ವಿರುದ್ಧ ಕಿಡಿ ಕಾರಿದ್ದಾರೆ. ಇದೀಗ ಶಕ್ತಿಮಾನ್ ಖ್ಯಾತಿಯ ಮನೀಶ್ ಖನ್ನಾ ಆದಿಪುರುಷ್ ವಿರುದ್ಧ ಗುಡುಗಿದ್ದಾರೆ.
ಇದೊಂದು ಚೀಪ್ ಫಿಲಂ, ಇಂಥ ಸಿನಿಮಾ ಮಾಡಿದೋರನ್ನು ಕ್ಷಮಿಸೋದು ಅಸಾಧ್ಯ, ಇವರನ್ನೆಲ್ಲಾ 50 ಡಿಗ್ರಿ ಸೆಲ್ಶಿಯಸ್‌ನಲ್ಲಿ ಸುಟ್ಟು ಹಾಕಬೇಕು. ರಾಮಾಯಣವನ್ನೇ ಹಾಳು ಮಾಡಿದ್ದಾರೆ ಎಂದು ರೇಗಿದ್ದಾರೆ.
ಇಲ್ಲಿ ಕೆಲವು ಪಾತ್ರಗಳು ಬಳಹ ಮಾರ್ಡನ್ ಹಾಗೂ ಗ್ಲಾಮರಸ್ ಆಗಿದೆ, ರಾವಣನನ್ನು ಚೀಪ್ ಆಗಿ ತೋರಿಸಲಾಗಿದೆ, ಹನುಮಂತನ ಸಂಭಾಷಣೆಯಲ್ಲಿ ಹುರುಳಿಲ್ಲ ಎನ್ನುವುದು ನೆಟ್ಟಿಗರ ಅಭಿಪ್ರಾಯ.