ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ, ವಿದೇಶದಲ್ಲಿ ಸದ್ಯ ಸುದ್ದಿಯಲ್ಲಿರುವ ಸಿನಿಮಾ ಪ್ರಭಾಸ್ ನಟನೆಯ ಆದಿಪುರುಷ.
ತೆರೆ ಕಾಣುವುದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಭರದಿಂದ ಮುಂಗಡ ಬುಕ್ಕಿಂಗ್ ಕೂಡ ಆಗುತ್ತಿದೆ. ವಿಶೇಷವೆಂದರೆ ಈ ಸಿನಿಮಾದ 4.7 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆಯಂತೆ.
ಸಿನಿಮಾ ವಿಮರ್ಶಕರಾಗಿರುವ ತರಣ್ ಆದರ್ಶ್ ಅವರು ನೀಡಿರುವ ಮಾಹಿತಿ ಪ್ರಕಾರ, ದೇಶಾದ್ಯಂತ ಈ ಸಿನಿಮಾದ ಟಿಕೆಟ್‌ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಗುರುವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಆದಿಪುರುಷ ಸಿನಿಮಾದ ಹಿಂದಿ ಮತ್ತು ತೆಲುಗು ಎರಡೇ ಭಾಷೆಯಲ್ಲಿ ಒಟ್ಟು 4,79,811 ಟಿಕೆಟ್ ಮಾರಾಟವಾಗಿದೆ.
ಬಿಡುಗಡೆ ದಿನವಾದ ಶುಕ್ರವಾರದ ಶೋಗೆ ಪಿವಿಆರ್‌ನಲ್ಲಿ 1,26,050, ಐನೊಕ್ಸ್‌ನಲ್ಲಿ 96,502 ಟಿಕೆಟ್ ಸೇರಿ ಒಟ್ಟು 2,22,552 ಟಿಕೆಟ್ ಬುಕ್ಕಿಂಗ್ ಆಗಿದೆ. ಶನಿವಾರ ಶೋಗಳಿಗೆ ಪಿವಿಆರ್‌ನಲ್ಲಿ 83,596, ಐನೊಕ್ಸ್‌ನಲ್ಲಿ 55,438 ಸೇರಿ ಒಟ್ಟು 1,39,034 ಟಿಕೆಟ್ ಬುಕ್ಕಿಂಗ್ ಆಗಿದೆ. ಹಾಗೆಯೇ ಭಾನುವಾರದ ಶೋಗೆ ಪಿವಿಆರ್‌ನಲ್ಲಿ 69,279, ಐನೊಕ್ಸ್‌ನಲ್ಲಿ 48,946 ಸೇರಿ ಒಟ್ಟು 1,18,225 ಟಿಕೆಟ್‌ಗಳು ಬುಕ್ಕಿಂಗ್ ಆಗಿವೆ.
ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿದ್ದರೆ, ಕೃತಿ ಸೀತೆಯ ಪಾತ್ರ ಹಾಗೂ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.
ಆದಿಪುರುಷ ಸಿನಿಮಾ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ಭಾರೀ ಮೆಚ್ಚುಗೆ ಪಡೆದುಕೊಂಡಿವೆ. ಇತ್ತೀಚೆಗೆ ಬಿಡುಗಡೆಯಾದ ರಾಮ್ ಸೀತಾ ರಾಮ್ ಹಾಡಂತೂ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು. ಹಾಗೆಯೇ ಸಿನಿಮಾದ ಟ್ರೇಲರ್ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.