ಚಂದ್ರಯಾನ-3 ನೌಕೆಗಿಂತ ಮೂರು ಪಟ್ಟು ದೂರ ಸಾಗಿದ ಆದಿತ್ಯ ಎಲ್‌-1

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಭಾರತದ ವೀಕ್ಷಣಾಲಯ ಉಪಗ್ರಹ ಆದಿತ್ಯ ಎಲ್‌-1 ಹೆಚ್ಚೂ ಕಡಿಮೆ ಚಂದ್ರಯಾನ-3 ನೌಕೆಗಿಂತ ಮೂರು ಪಟ್ಟು ದೂರವನ್ನು ಕ್ರಮಿಸಿದೆ.

ಶನಿವಾರ ಈ ಮಾಹಿತಿ ನೀಡಿರುವ ಇಸ್ರೋ, ಆದಿತ್ಯ ಎಲ್‌ 1 ಉಪಗ್ರಹ ಇಂದು ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ ದೂರದಲ್ಲಿ ಪ್ರಯಾಣ ಮಾಡುತ್ತಿದೆ ಎಂದು ಟ್ವೀಟ್‌ ಮೂಲಕ ತಿಳಿಸಿದೆ.

ಭೂಮಿ ಹಾಗೂ ಚಂದ್ರನ ನಡುವೆ 3.84 ಲಕ್ಷ ಕಿಲೋಮೀಟರ್‌ ದೂರ ಇದೆ. ಅದೇ ಲೆಕ್ಕಾಚಾರದಲ್ಲಿ ನೋಡಿದರೆ, ಬಹುತೇಕ ಚಂದ್ರಯಾನ-3 ನೌಕೆಗಿಂತ ಮೂರುಪಟ್ಟು ದೂರ ಆದಿತ್ಯ ಎಲ್‌-1 ನೌಕೆ ಈಗಾಗಲೇ ಕ್ರಮಿಸಿದೆ.ಆದಿತ್ಯ ಎಲ್‌ 1 ಗಗನನೌಕೆಯು ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿ, ಭೂಮಿಯ ಪ್ರಭಾವದ ಗೋಳದಿಂದ ಯಶಸ್ವಿಯಾಗಿ ಪಾರಾಗಿದೆ. ಇದು ಈಗ ಸೂರ್ಯ-ಭೂಮಿಯ ಲಾಗ್ರೇಂಜ್ ಪಾಯಿಂಟ್ 1 (L1) ಕಡೆಗೆ ತನ್ನ ಮಾರ್ಗವನ್ನು ನೋಡಿಕೊಂಡು ಹೋಗುತ್ತಿದೆ ಎಂದು ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!