LIFESTYLE | ಈ ಎಂಟು ಅಭ್ಯಾಸಗಳನ್ನು ರೂಢಿ ಮಾಡಿಕೊಂಡ್ರೆ ನಿಮ್ಮ ಜೀವನವೇ ಬದಲಾಗತ್ತೆ

ಮಾಡಿದ್ದನ್ನೇ ಮಾಡ್ತೀರಿ, ಯಾವ ಬದಲಾವಣೆಯೂ ಇಲ್ಲ. ಆದರೆ ಲೈಫ್‌ ಚೇಂಜ್‌ ಆಗ್ಬೇಕು ಅಂತ ಆಸೆ ಪಡ್ತೀರಿ. ಇದರಲ್ಲಿ ಅರ್ಥ ಇಲ್ಲ ಅಲ್ವಾ? ನಮ್ಮ ಅಭ್ಯಾಸಗಳೇ ನಮ್ಮ ಜೀವನ. ಇದನ್ನು ಬದಲು ಮಾಡಿಕೊಂಡ್ರೆ, ಹೊಸತನ್ನು ಸೇರಿಸಿಕೊಂಡ್ರೆ ಜೀವನ ಬದಲಾಗುತ್ತದೆ. ಯಾವೆಲ್ಲ ಅಭ್ಯಾಸಗಳು ನೋಡಿ..

ವರ್ಕೌಟ್‌
ದಿನಕ್ಕೆ ಒಂದು ಗಂಟೆಯ ವ್ಯಾಯಾಮ, ಯಾವ ರೀತಿಯದ್ದಾಗಿದ್ದರೂ ಆಗಲಿ. ಡ್ಯಾನ್ಸ್‌, ಸೈಕಲ್‌, ಯೋಗ, ಜಿಮ್‌ ಏನಾದ್ರೂ ಆಗಿರಲಿ. ಫಿಸಿಕಲ್‌ ಆಕ್ಟಿವಿಟಿ ಇರಲಿ.

ನೀರು
ದಿನಕ್ಕೆ ಎರಡರಿಂದ ಮೂರು ಲೀಟರ್‌ ನೀರು ಮಿಸ್‌ ಮಾಡದೆ ಕುಡಿಯಿರಿ. ಮೋಟಿವೇಷನ್‌ಗಾಗಿ ಮೂರು ಲೀಟರ್‌ನ ನೀರಿನ ಬಾಟಲ್‌ ಕೊಳ್ಳಿ. ಅದನ್ನು ಮುಗಿಸಿ ದಿನ ಅಂತ್ಯ ಮಾಡಿ.

ಬ್ಯಾಲೆನ್ಸ್‌ ಫುಡ್‌
ಪ್ರೋಟೀನ್‌, ಫೈಬರ್‌, ಕಾರ್ಬ್ಸ್‌,ವೈಟಮಿನ್ಸ್‌ ಎಲ್ಲ ಇರುವ ಬ್ಯಾಲೆನ್ಸ್‌ ಮೀಲ್‌ ತಿನ್ನಿ.

ನಕ್ಕುಬಿಡಿ ಪ್ಲೀಸ್‌
ದಿನಕ್ಕೆ ಏಳು ನಿಮಿಷ ನಗಬೇಕಂತೆ. ಇದು ನಿಮ್ಮ ಆಯಸ್ಸನ್ನು ಜಾಸ್ತಿ ಮಾಡುತ್ತದೆ.

ನಿದ್ದೆ
ದಿನಕ್ಕೆ ಎಂಟು ಗಂಟೆಯ ನಿದ್ದೆ ಬೇಕೇಬೇಕು. ಈ ವಿಷಯವನ್ನು ನೆಗ್ಲೆಕ್ಟ್‌ ಮಾಡಬೇಡಿ. ನಿದ್ದೆಯಲ್ಲೇ ನಿಮ್ಮ ದೇಹ ರಿಪೇರಿ ಆಗೋದು.

ಐದು ನಿಮಿಷ ಧ್ಯಾನ
ಮೆಡಿಟೇಷನ್‌ ಅಭ್ಯಾಸವೇ ಇಲ್ಲದಿದ್ರೂ ಪರವಾಗಿಲ್ಲ. ದಿನಕ್ಕೆ ಐದು ನಿಮಿಷದಿಂದ ಆರಂಭಿಸಿ. ನಂತರ ಅದೇ ನಿಮ್ಮನ್ನು ಆವರಿಸುತ್ತದೆ.

ದುಷ್ಟರಿಂದ ದೂರ ಇರಿ
ಕೆಟ್ಟವರು ಅಥವಾ ಅವರಿಂದ ನೆಗೆಟಿವ್‌ ವೈಬ್‌ ಬರುತ್ತಿದೆ ಎಂದರೆ ಅವರ ಜೊತೆ ಯಾಕೆ? ಅವರನ್ನು ದೂರ ಇಡಿ. ನಿಮ್ಮ ಮನಸ್ಸಿನ ತನಕ ಅವರು ಬರೋದು ಬೇಡ

ಹಾಡುಗಳೇ ಚಂದ
ದಿನಕ್ಕೆ ಎರಡಾದರೂ ಮೋಟಿವೇಟ್‌ ಮಾಡುವಂಥ ಹಾಡುಗಳನ್ನು ಕೇಳಿನೋಡಿ, ಇದೆಲ್ಲವೂ ನಿಮ್ಮ ಜೀವನ ಬದಲು ಮಾಡೋ ಹ್ಯಾಬಿಟ್ಸ್‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!