ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ದತ್ತು: ಹೊಸ ಚಿಂತನೆ ಮುಂದಿಟ್ಟ ಡಿಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಫಂಡ್​​ ಮೂಲಕ (CSR Fund) ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಖಾಸಗಿ ಶಾಲೆಗಳು ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ಪಡೆಯಬೇಕು. ಹೀಗೊಂದು ಹೊಸ ಪರಿಕಲ್ಪನೆ ಜಾರಿಗೆ ಮುಂದಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ (DK Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನೂ ಕೂಡ ಮೂರು ಶಾಲೆಗಳ ಮಾಲೀಕ. ನಾನೂ ಪಂಚಾಯಿತಿ ಮಟ್ಟದಲ್ಲಿ 3 ಸರ್ಕಾರಿ ಶಾಲೆ ದತ್ತು ಪಡೆಯುವೆ ಎಂದು ಹೇಳಿದ್ದಾರೆ.

ಈ ವೇಳೆ ಕೆಆರ್​​ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರವಾಗಿ ಪ್ರತಿಪಕ್ಷಗಳು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಯಾಕೆ ನೀರು ಬಿಟ್ಟಿದ್ದೀರಿ ಎಂದು ನಮ್ಮನ್ನು ಪ್ರಶ್ನಿಸಲು ನಮ್ಮ ಬಳಿ ಡ್ಯಾಂನ ಬೀಗ ಇದೆಯಾ ಎಂದು ಮರು ಪ್ರಶ್ನೆ ಮಾಡಿದರು. ಕೆಆರ್​ಎಸ್ ಬೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಇದೆ, ಕೇಂದ್ರ ಸರ್ಕಾರದ ಬಳಿ‌ ಇದೆ ಎಂದು ಹೇಳಿದರು.

ರಾಜಕಾರಣವನ್ನು ಎಷ್ಟು ಮಾಡಬೇಕೋ ಅಷ್ಟೇ ಮಾಡಬೇಕು. ಬೊಮ್ಮಾಯಿಗೂ ಕಾನೂನು ಗೊತ್ತಿದೆ. ನೀರು ಯಾರ ನಿಯಂತ್ರಣದಲ್ಲಿ ಇದೆ? ಇದೆಲ್ಲ ಈಗ ಚರ್ಚೆ ಮಾಡಲ್ಲ. 30-40 ವರ್ಷಗಳಲ್ಲಿ ಈಗಲೇ ರಾಜ್ಯದಲ್ಲಿ ಮಳೆ‌ ಕೊರತೆ ಆಗಿರೋದು. ನೀರು ಬಿಡಬೇಡಿ ಅಂತಾ ನಮ್ಮ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಕೋರ್ಟ್ ಕೇಳಬೇಕಲ್ಲ, ರೈತರೂ ಕೋರ್ಟ್​​ಗೆ ಅರ್ಜಿ ಹಾಕಲಿ ಎಂದು ಡಿಕೆ ಶಿವಕುಮಾರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!