August 10, 2026
Monday, August 10, 2026
spot_img

ಮಕ್ಕಳು, ಮುತ್ತಜ್ಜಂದಿರಿಗೆ ದೂರವಿರಲು ಸೂಚನೆ! ‘ಟಾಕ್ಸಿಕ್’ ಡಿಸ್ಕ್ಲೈಮರ್ ಹಿಂದಿನ ಕಥೆಯೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದ ‘ಲೇಡೀಸ್ ಆ್ಯಂಡ್ ಲೇಡಿಸ್’ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ನಾಯಕಿಯರನ್ನು ಪರಿಚಯಿಸುವ ಈ ವಿಡಿಯೋದಲ್ಲಿ ನೀಡಲಾಗಿರುವ ವಿಭಿನ್ನ ಡಿಸ್ಕ್ಲೈಮರ್ (ಎಚ್ಚರಿಕೆ) ಈಗ ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಲಕ್ಷಣ ಡಿಸ್ಕ್ಲೈಮರ್‌ನಲ್ಲೇನಿದೆ?

ಟೀಸರ್ ಆರಂಭದಲ್ಲೇ, “ಚಿಕ್ಕ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಇದರಿಂದ ದೂರವಿಡಿ, ಸ್ವಂತ ಜವಾಬ್ದಾರಿಯ ಮೇಲೆ ವೀಕ್ಷಿಸಿ” ಎಂದು ಪೋಷಕರಿಗೆ ಹಾಗೂ ಮುತ್ತಜ್ಜ-ಮುತ್ತಜ್ಜಿಯರಿಗೆ ವಿಚಿತ್ರವಾಗಿ ಎಚ್ಚರಿಸಲಾಗಿದೆ. ಚಿತ್ರವು ಅತ್ಯಂತ ಬೋಲ್ಡ್ ಹಾಗೂ ಹಿಂಸಾತ್ಮಕ ಕಂಟೆಂಟ್ ಹೊಂದಿರಲಿದೆ ಎಂಬುದನ್ನು ಚಿತ್ರತಂಡ ಪರೋಕ್ಷವಾಗಿ ಸಾಬೀತುಪಡಿಸಿದೆ. ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ) ಎಂಬ ಅಡಿಬರಹಕ್ಕೆ ತಕ್ಕಂತೆಯೇ ಈ ಎಚ್ಚರಿಕೆ ಇದೆ.

ವಿವಾದದಿಂದ ಬಚಾವಾಗಲು ಚಿತ್ರತಂಡದ ಮಾಸ್ಟರ್ ಪ್ಲಾನ್?

ಹಾಗಾದರೆ ಈ ಎಚ್ಚರಿಕೆಯ ಹಿಂದಿನ ಅಸಲಿ ಕಾರಣವೇನು ಎಂದು ಫ್ಯಾನ್ಸ್ ಹುಡುಕ ಹೊರಟಿದ್ದಾರೆ. ಈ ಹಿಂದೆ ಚಿತ್ರದ ಆರಂಭಿಕ ಕಂಟೆಂಟ್‌ನ ಬೋಲ್ಡ್ ದೃಶ್ಯಗಳ ವಿರುದ್ಧ ಮಹಿಳಾ ಸಂಘಟನೆಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದವು. “ಮೊದಲೇ ಎಚ್ಚರಿಕೆ ನೀಡಿದ್ದರೆ ಮಕ್ಕಳ ಮುಂದೆ ಟೀಸರ್ ಹಾಕುತ್ತಿರಲಿಲ್ಲ” ಎಂಬ ಆಕ್ಷೇಪಗಳು ಕೇಳಿಬಂದಿದ್ದವು.

ಹೀಗಾಗಿ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕಾನೂನು ಸಂಕಷ್ಟ ಹಾಗೂ ಸೆನ್ಸಾರ್ ವಿವಾದಗಳಿಂದ ಮುಂಚಿತವಾಗಿಯೇ ಸೇಫ್ ಆಗಲು ಚಿತ್ರತಂಡ ಈ ಚಾಣಾಕ್ಷ ಹೆಜ್ಜೆ ಇಟ್ಟಿದೆ ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ. ಒಟ್ಟಿನಲ್ಲಿ ‘ಟಾಕ್ಸಿಕ್’ ಚಿತ್ರದ ಈ ತಂತ್ರಗಾರಿಕೆ ಸಖತ್ ವರ್ಕ್ ಆಗಿದ್ದು, ಹೈಪ್ ಮತ್ತಷ್ಟು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !