ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಪಾಕ್ ನ ಇಸ್ಲಾಮಾಬಾದ್, ಅಬೋಟಾಬಾದ್, ನೌಶೇರಾ ಮತ್ತು ಜಮ್ರುದ್‌ನಲ್ಲಿರುವ ಸೇನಾ ನೆಲೆಗಳ ಮೇಲೆ ಅಫ್ಘಾನಿಸ್ತಾನ ವೈಮಾನಿಕ ದಾಳಿ ನಡೆಸಿದೆ .
ಭಾರತದ ಕಾಲಮಾನ ಮಧ್ಯಾಹ್ನ 12 ಗಂಟೆಗೆ ರಾಜಧಾನಿ ಇಸ್ಲಾಮಾಬಾದ್, ಅಬೋಟಾಬಾದ್, ನೌಶೇರಾ ಮತ್ತು ಜಮ್ರುದ್‌ಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ಹೇಳಿದೆ.
ಪಾಕಿಸ್ತಾನ ವಾಯುಪಡೆ ಕಾಬೂಲ್ ಮತ್ತು ಕಂದಹಾರ್ ಮೇಲೆ ದಾಳಿ ಮಾಡಿ 13 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದೆ. ಇದಕ್ಕೆಪ್ರತಿಕ್ರಿಯೆಯಾಗಿ ಈ ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ. ಇದು ಪ್ರತೀಕಾರದ ಕ್ರಮ ಎಂದು ಅಫ್ಘಾನ್ ಸಚಿವಾಲಯ ಹೇಳಿದೆ.



