ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚಿರಿ: ಮಹಿಳೆಯರಿಗೆ ತಾಲಿಬಾನ್ ಸರ್ಕಾರದಿಂದ ಬಂತು ಹೀಗೊಂದು ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಬಂದ ನಂತರ ಕೊನೆಯಿಲ್ಲದ ನಿರ್ಬಂಧಗಳನ್ನು ಹೇರುವ ಮೂಲಕ ಹೆಣ್ಣುಮಕ್ಕಳು, ಯುವತಿಯರು ಮತ್ತು ಮಹಿಳೆಯರ ಬದುಕು ದುಸ್ತರ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿರ್ಬಂಧ, ಯುವತಿಯರು ವಿಶ್ವವಿದ್ಯಾನಿಲಯಗಳಲ್ಲಿ ಓದಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಯಿತು. ಈ ನಿರ್ಬಂಧಗಳು ಮುಂದುವರಿಯುತ್ತಿದ್ದಂತೆ ತಾಲಿಬಾನ್ ಸರ್ಕಾರ ಮತ್ತೊಂದು ಎಚ್ಚರಿಕೆ ನೀಡಿದ್ದು, ಮಹಿಳಾ ಬ್ಯೂಟಿ ಸಲೂನ್ ಮುಚ್ಚಲು ಆದೇಶ ಹೊರಡಿಸಲಾಗಿದೆ.

ಮಂಗಳವಾರ (ಜುಲೈ 4, 2023)ರಂದು ಸರ್ಕಾರದ ಪ್ರತಿನಿಧಿ ಈ ಆದೇಶಗಳನ್ನು ಹೊರಡಿಸಿದ್ದಾರೆ. ಇನ್ನು ಮುಂದೆ ಮಹಿಳೆಯರು ಬ್ಯೂಟಿ ಪಾರ್ಲರ್ ನಡೆಸಬಾರದು ಎಂದು ಸಚಿವ ಮೊಹಮ್ಮದ್ ಸಿದ್ದಿಕ್ ಅಕಿಫ್ ಹೇಳಿದ್ದಾರೆ. ಮೇಕಪ್ ಕಲಾವಿದರು ಈ ಆದೇಶಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವೃತ್ತಿಗೆ ಇಷ್ಟೊಂದು ನಿರ್ಬಂಧ ಹೇರಿದರೆ ಹೇಗೆ ಎಂದು ತಮ್ಮ ವೇದನೆ ವ್ಯಕ್ತಪಡಿಸುತ್ತಿದ್ದಾರೆ.

ಈ ಆದೇಶಗಳನ್ನು ಹೊರಡಿಸುವ ಸಲುವಾಗಿ ಆಯಾ ಬ್ಯೂಟಿ ಪಾರ್ಲರ್‌ಗಳಿಗೆ ನೋಟಿಸ್‌ಗಳನ್ನು ನೀಡಲಾಗುವುದು. ಅವುಗಳನ್ನು ಒಂದು ತಿಂಗಳೊಳಗೆ ಮುಚ್ಚಬೇಕು. ಮುಚ್ಚಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ಆದೇಶಗಳನ್ನು ಉಲ್ಲಂಘಿಸಿ ಯಾರಾದರೂ ಪಾರ್ಲರ್‌ಗಳನ್ನು ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!