ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 30 ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ ಟೂರ್ನಿಗೆ(Asia Cup 2023) ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ 17 ಮಂದಿ ಆಟಗಾರರ ತಂಡವನ್ನು(afghanistan cricket team) ಪ್ರಕಟಿಸಿದೆ.
ಈ ಬಾರಿಯ ಐಪಿಎಲ್ ವೇಳೆ ವಿರಾಟ್ ಕೊಹ್ಲಿಯನ್ನು ಕೆಣಕಿ ಭಾರಿ ಸುದ್ದಿಯಾಗಿದ್ದ ನವೀನ್ ಉಲ್ ಹಕ್ ಅವರು ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಹಶ್ಮತುಲ್ಲಾ ಶಾಹಿದಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಶನಿವಾರವಷ್ಟೇ ಪಾಕಿಸ್ತಾನ ವಿರುದ್ಧ ಕೊನೆಗೊಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ಫರೀದ್ ಅಹ್ಮದ್ ಮಲಿಕ್ ಮತ್ತು ಶಾಹಿದುಲ್ಲಾ ಕಮಾಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಅಫಘಾನಿಸ್ತಾ ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ರಶೀದ್ ಖಾನ್, ಗುಲ್ಬದಿನ್ ನೈಬ್, ಕರೀಮ್ ಜನತ್, ಅಬ್ದುಲ್ ರಹಮಾನ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್ ಸಫಿ, ಫಜಲ್ಹಕ್ ಫಾರೂಕಿ.