ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರು ಬೆಚ್ಚಿಬೀಳುವಂಥ ಮರ್ಡರ್ ನಡೆದಿದೆ. ಸೆಕ್ಯುರಿಟಿ ಗಾರ್ಡ್‌ನ್ನು ಕಾಲೇಜಿನ ವಿದ್ಯಾರ್ಥಿ ಮನಸೋ ಇಚ್ಛೆ ಚಾಕು ಇರಿದು ಕೊಲೆ ಮಾಡಿದ್ದಾನೆ.
ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಡಿಸಿಪ್ಲೀನರಿ ಇನ್ ಚಾರ್ಜ್ ಹತ್ಯೆ ಮಾಡಲಾಗಿದ್ದು, ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಕೊಲೆ ಮಾಡಿದ್ಯಾಕೆ?
ಅಮೃತಹಳ್ಳಿ ಸಿಂಧಿ ಕಾಲೇಜಿನಲ್ಲಿ ನಿನ್ನೆ ಕಾನ್ವೋಕೇಶನ್ ಡೇ ಆಯೋಜಿಸಲಾಗಿತ್ತು. ಕಾರ್ಯಕ್ರಮ ಶುರುವಾದ ನಂತರ ಮುಗಿಯುವವರೆಗೂ ವಿದ್ಯಾರ್ಥಿಗಳ ಓಡಾಟ ಮಾಡದಂತೆ ಸೂಚನೆ ನೀಡಲಾಗಿತ್ತು. ಕಾನ್ವಕೇಷನ್ ಮುಗಿಯುವುದರ ಒಳಗೆ ಕೊಲೆ ಮಾಡಿದ ವಿದ್ಯಾರ್ಥಿ ಭಾರ್ಗವ್ ಐದಾರು ಬಾರಿ ಓಡಾಡಿದ್ದ. ಆಗ ಡಿಸಿಪ್ಲೀನರಿ ಇನ್ ಚಾರ್ಜ್ ಜೈಕಿಶೋರ್ ರಾಯ್ ಮತ್ತೆ ಓಡಾಡದಂತೆ ವಾರ್ನಿಂಗ್ ಮಾಡಿದ್ದರು.
ವಾರ್ನಿಂಗ್ ನೀಡುವ ವೇಳೆ ಭಾರ್ಗವ್ ಸುತ್ತಮುತ್ತ ಸಾಕಷ್ಟು ಹೆಣ್ಣುಮಕ್ಕಳಿದ್ದರು. ಎಲ್ಲರೆದುರು ನೀಡಿದ ವಾರ್ನಿಂಗ್‌ನ್ನು ಭಾರ್ಗವ್ ಅವಮಾನವಾಗಿ ತೆಗೆದುಕೊಂಡಿದ್ದ ಎನ್ನಲಾಗಿದೆ. ಭಾರ್ಗವ್ ಮೂಲತಃ ಅಸ್ಸಾಂ ಮೂಲದವನು. ಅಮೃತಹಳ್ಳಿ ಬಳಿ ಪಿಜಿಯಲ್ಲಿ ವಾಸವಿದ್ದು ಸಿಂಧಿ ಕಾಲೇಜಿನಲ್ಲಿ ಪೈನಲ್ ಇಯರ್ ಬಿ.ಎ ವ್ಯಾಸಾಂಗ ಮಾಡುತ್ತಿದ್ದ.
ನಿನ್ನೆ ಸೆಕ್ಯೂರಿಟಿ ಗಾರ್ಡ್ ಜೊತೆ ಗಲಾಟೆಯಾದ ನಂತರ ಪಿಜಿಗೆ ತೆರಳಿ ಚಾಕು ತಂದಿದ್ದ. ಕೇವಲ 15 ಸೆಕೆಂಡ್ ನಲ್ಲಿ ಐದಾರು ಭಾರಿ ಸೆಕ್ಯೂರಿಟಿ ಗಾರ್ಡ್ ಎದೆಗೆ ಮನಸೋ ಇಚ್ಚೆ ಇರಿದು ಹತ್ಯೆ ಮಾಡಿದ್ದಾನೆ. ಸದ್ಯ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ 52 ವರ್ಷದ ಜೈ ಕಿಶೋರ್ ರಾಯ್ ಹಲವು ವರ್ಷಗಳಿಂದ ವಾಸವಿದ್ದರು. ಇದೇ ಸಿಂಧಿ ಕಾಲೇಜಿನಲ್ಲಿ ಕೆಲ ವರ್ಷಗಳಿಂದ ಸೆಕ್ಯುರಿಟಿ ಇಂಚಾರ್ಜ್ ಆಗಿ ಕೆಲಸ ಮಾಡ್ತಿದ್ದರು. ಡಿಸಿಪ್ಲೈನ್ ಬಗ್ಗೆ ಹೆಚ್ಚು ಗಮನವಹಿಸ್ತಿದ್ದರು. ವಿಧ್ಯಾರ್ಥಿಗಳಿಗೆ ಕೊಂಚ ಸ್ಟ್ರಿಕ್ಟ್ ವರ್ತನೆ ತೋರ್ತಿದ್ದರು. ಇತ್ತ ಭಾರ್ಗವ್‌ಗೆ ಕುಡಿಯುವ ಅಭ್ಯಾಸ ಇತ್ತು. ಆತ ಕುಡಿದುಕೊಂಡೇ ಕಾಲೇಜಿಗೆ ಬರುತ್ತಿದ್ದ, ನಿನ್ನೆ ಕೊಲೆ ಮಾಡಿದ ವೇಳೆಯೂ ಆತ ಕುಡಿದಿದ್ದ ಎಂದು ಹೇಳಲಾಗಿದೆ.