ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಡ್ವೈನ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಂಡಳಿ (CSA) ಪ್ರಿಟೋರಿಯಸ್ ನಿವೃತ್ತಿ ನಿರ್ಧಾರವನ್ನು ಖಚಿತ ಪಡಿಸಿದೆ.
2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ 31 ವರ್ಷ ವಯಸ್ಸಿನ ಪ್ರಿಟೋರಿಯಸ್, 30 ಅಂತಾರಾಷ್ಟ್ರೀಯ ಟಿ20, 27 ಏಕದಿನ ಪಂದ್ಯಗಳು ಹಾಗೂ ಮೂರು ಟೆಸ್ಟ್ ಸರಣಿಗಳಲ್ಲಿ ಪ್ರತಿನಿಧಿಸಿದ್ದಾರೆ. ಎರಡು ವಿಶ್ವಕಪ್ಗಳಲ್ಲಿ ತಂಡದ ಭಾಗವಾಗಿದ್ದರು.
2021ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ 17 ರನ್ಗಳಿಗೆ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ದಕ್ಷಿಣ ಆಫ್ರಿಕಾ ಬೌಲರ್ಗಳಲ್ಲೇ ಅತ್ಯುತ್ತಮ ದಾಖಲೆ ಬರೆದಿದ್ದರು.