28 ವರ್ಷಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆಗೆ ವೇದಿಕೆಯಾಗುತ್ತಿದೆ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

1996ರಲ್ಲಿ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆದಿತ್ತು. ಇದಾದ 28 ವರ್ಷಗಳ ಬಳಿಕ ಇದೀಗ ಭಾರತ ವಿಶ್ವಸುಂದರಿ ಸ್ಪರ್ಧೆಗೆ ಮತ್ತೆ ವೇದಿಕೆಯಾಗಲಿದೆ.

ದೆಹಲಿಯ ಭಾರತ್ ಮಂಟಪ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಫೆ. 18 ರಿಂದ ಮಾರ್ಚ್ 9ರವರಗೆ ಸ್ಪರ್ಧೆಗಳು ನಡೆಯಲಿದ್ದು, ಒಟ್ಟಾರೆ 120 ದೇಶದ ಸ್ಪರ್ಧಿಗಳು ಭಾರತಕ್ಕೆ ಆಗಮಿಸಲಿದ್ದಾರೆ.

ಫೆ.20ರಂದು ದೆಹಲಿಯಲ್ಲಿ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ. India welcomes the world gala ದೊಂದಿಗೆ ಸ್ಪರ್ಧೆ ಆರಂಭವಾಗುತ್ತದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!