ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ತಂಡ ಬೌಲಿಂಗ್ ನಲ್ಲೂ ಹೈದರಾಬಾದ್ ತಂಡಕ್ಕೆ ಆಘಾತ ನೀಡಿದೆ. ಈ ಮೂಲಕ 72 ರನ್ ಭರ್ಜರಿ ಗೆಲುವು ದಾಖಲಿಸಿದೆ.
204 ರನ್ ಟಾರ್ಗೆಟ್ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು. ಈ ಮೂಲಕ 72 ರನ್ ಹೀನಾಯ ಸೋಲು ಕಂಡಿತು.
ಹೈದರಾಬಾದ್ ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಮಯಾಂಕ್ ಅಗರ್ವಾಲ್ ಹೋರಾಟ ನೀಡುವ ಸೂಚನೆ ನೀಡಿದರು. ಆದರೆ ರಾಹುಲ್ ತ್ರಿಪಾಠಿ ಡಕೌಟ್ ಆದರು. ಹ್ಯಾರಿ ಬ್ರೂಕ್ 13 ರನ್ ಸಿಡಿಸಿ ಔಟಾದರು. ವಾಶಿಂಗ್ಟನ್ ಸುಂದರ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಮಯಾಂಕ್ ಅಗರ್ವಾಲ್ ಹೋರಾಟ ಕೇವಲ 27 ರನ್‌ಗೆ ಅಂತ್ಯಗೊಂಡಿತು.
ಗ್ಲೇನ್ ಫಿಲಿಪ್ಸ್ 8 ರನ್ ಸಿಡಿಸಿ ಔಟಾದರು. ಆದಿಲ್ ರಶೀದ್ 18 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಅಬ್ದುಲ್ ಸಮಾದ್ ಹಾಗೂ ಉಮ್ರಾನ್ ಮಲಿಕ್ ಹೋರಾಟದಿಂದ ಸನ್‌ರೈಸರ್ಸ್ ಹೈದರಾಬಾದ್ ಸೋಲಿನ ಅಂತರ ಕಡಿಮೆ ಮಾಡಿದು. ಸಮಾದ್ ಅಜೇಯ 32 ರನ್ ಸಿಡಿಸಿದರೆ, ಉಮ್ರಾನ್ ಮಲಿಕ್ 19 ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು.