March 22, 2026
Sunday, March 22, 2026
spot_img

KKR, ಲಾಹೋರ್ ಬಳಿಕ ಈಗ RCB ಅಧಿಪತ್ಯ: ಟಿ20 ಫೈನಲ್ ಇತಿಹಾಸದಲ್ಲೇ ಇದು ‘ಮಹಾ ಚೇಸಿಂಗ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಫೈನಲ್ ಪಂದ್ಯವೆಂದರೆ ಅಲ್ಲಿ ಒತ್ತಡ ಸಾಮಾನ್ಯ. ಅಂತಹ ಒತ್ತಡದ ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟುವುದು ಸುಲಭದ ಮಾತಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಇದನ್ನು ಸಾಧ್ಯವಾಗಿಸಿ ತೋರಿಸಿದೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲೆಯ ಜಯ ಸಾಧಿಸುವ ಮೂಲಕ ಆರ್​​ಸಿಬಿ ಎರಡನೇ ಬಾರಿಗೆ ಟ್ರೋಫಿ ಗೆದ್ದು ಬೀಗಿದೆ.

ಟಾಸ್ ಗೆದ್ದ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ ಬೃಹತ್ 203 ರನ್ ಕಲೆಹಾಕಿತು. 204 ರನ್‌ಗಳ ಹಿಮಾಲಯದಂತಹ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭದಲ್ಲೇ ಗ್ರೇಸ್ ಹ್ಯಾರಿಸ್ (9) ವಿಕೆಟ್ ಕಳೆದುಕೊಂಡು ಆಘಾತ ಎದುರಾಗಿತ್ತು. ಆದರೆ, ನಾಯಕಿ ಸ್ಮೃತಿ ಮಂಧಾನ (87 ರನ್) ಮತ್ತು ಜಾರ್ಜಿಯಾ ವೊಲ್ (79 ರನ್) ಅವರ ಜವಾಬ್ದಾರಿಯುತ ಹಾಗೂ ಪ್ರಚಂಡ ಬ್ಯಾಟಿಂಗ್ ನೆರವಿನಿಂದ ಆರ್​​ಸಿಬಿ 19.4 ಓವರ್‌ಗಳಲ್ಲಿ 6 ವಿಕೆಟ್ ಅಂತರದ ಐತಿಹಾಸಿಕ ಜಯ ದಾಖಲಿಸಿತು.

ಟಿ20 ಇತಿಹಾಸದಲ್ಲಿ ಈವರೆಗೆ ಕೇವಲ ಮೂರು ತಂಡಗಳು ಮಾತ್ರ ಫೈನಲ್ ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್ ಚೇಸ್ ಮಾಡಿ ಚಾಂಪಿಯನ್ ಆಗಿವೆ. ಈ ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಆರ್​​ಸಿಬಿ ಪಾತ್ರವಾಗಿದೆ.

ಈ ಗೆಲುವಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪುರುಷರ ಕ್ರಿಕೆಟ್‌ನ ದಾಖಲೆಗಳನ್ನು ಸರಿಗಟ್ಟುವುದರ ಜೊತೆಗೆ, ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !