ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ರೈಲು ಅಪಘಾತದ ನಂತರ, ರೈಲ್ವೆ ಮಂಡಳಿಯು ಅಪಘಾತಗಳನ್ನು ತಡೆಗಟ್ಟಲು ಪ್ರಮುಖ ಆದೇಶಗಳನ್ನು ಹೊರಡಿಸಿದೆ. ಸಿಗ್ನಲಿಂಗ್ ವ್ಯವಸ್ಥೆಯನ್ನು ಡಬಲ್ ಲಾಕ್ ಮಾಡಲು ರೈಲ್ವೆ ಮಂಡಳಿಯು ಅಧಿಕಾರಿಗಳಿಗೆ ಆದೇಶಿಸಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ಬಾಲಸೋರ್‌ನಲ್ಲಿ ಲೂಪ್ ಲೈನ್‌ಗೆ ಹೋಗಿ ನಿಂತ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಲು ಸಿಗ್ನಲಿಂಗ್ ವ್ಯವಸ್ಥೆಯೇ ಪ್ರಮುಖ ಕಾರಣ ಎಂದು ರೈಲ್ವೆ ಮಂಡಳಿ ಹೇಳಿದೆ.
ರೈಲು ನಿಯಂತ್ರಣ ಕಾರ್ಯವಿಧಾನಗಳು, ರಿಲೇ ಹಟ್ಸ್ ಹೌಸಿಂಗ್ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಸೇರಿದಂತೆ ಎಲ್ಲಾ ರಿಲೇ ಕೊಠಡಿಗಳಿಗೆ ಡಬಲ್ ಲಾಕ್ ಅನ್ನು ಸ್ಥಾಪಿಸಲು ರೈಲ್ವೆ ಮಂಡಳಿಯು ನಿರ್ದೇಶನ ನೀಡಿದೆ. ಯಾರಾದರೂ ರಿಲೇ ಕೊಠಡಿಯೊಳಗೆ ಹೋದರೆ, ಸಿಗ್ನಲಿಂಗ್‌ಗೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.
ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ದೋಷರಹಿತವಾಗಿಸಲು ಡಬಲ್ ಲಾಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಡಬಲ್ ಲಾಕಿಂಗ್ ವ್ಯವಸ್ಥೆ ಅಳವಡಿಸುವವರೆಗೆ ಈಗಿರುವ ಒಂದು ಬೀಗವನ್ನು ಸ್ಟೇಷನ್ ಮಾಸ್ಟರ್ ಬಳಿ ಇಡಬೇಕು ಎಂದು ಮಂಡಳಿ ಸೂಚಿಸಿದೆ. ಲೆವೆಲ್-ಕ್ರಾಸಿಂಗ್ ಸಾಧನಗಳು, ಪಾಯಿಂಟ್ ಮತ್ತು ಟ್ರ್ಯಾಕ್ ಸರ್ಕ್ಯೂಟ್ ಸಿಗ್ನಲ್‌ಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ರೈಲ್ವೆ ಮಂಡಳಿ ಹೊರಡಿಸಿದ ಸೂಚನೆಗಳಲ್ಲಿ ವಿವರಿಸಲಾಗಿದೆ.