ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಬೆನ್ನಲ್ಲೇ ವಾಯುಸೇನೆಯ ಫೈಟರ್‌ ಜೆಟ್‌ಗಳಿಗೆ ಇಂಜಿನ್‌ ಉತ್ಪಾದನೆಗೆ ನಡೆಯಿತು ಐತಿಹಾಸಿಕ ಒಪ್ಪಂದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿರುವ ಈ ಕ್ಷಣ ಭಾರತದ ಹಿಂದುಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ ಹಾಗೂ ಅಮೆರಿಕದ ಏರ್‌ಸ್ಪೇಸ್‌ ದೈತ್ಯ ಜನಲರ್‌ ಎಲೆಕ್ಟ್ರಿಕ್‌ ನಡುವೆ ಐತಿಹಾಸಿಕ ಒಪ್ಪಂದವಾಗಿದೆ.

ಭಾರತೀಯ ವಾಯುಸೇನೆಯ ಫೈಟರ್‌ ಜೆಟ್‌ಗಳಿಗೆ ಇಂಜಿನ್‌ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಎಚ್‌ಎಎಲ್‌ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಅಮೆರಿಕದ ಜನರಲ್ ಎಲೆಕ್ಟ್ರಿಕ್‌ನ ಏರೋಸ್ಪೇಸ್ ಘಟಕ ಗುರುವಾರ ಪ್ರಕಟಿಸಿದೆ.

ಅಮೆರಿಕದಜಿಇ ಏರೋಸ್ಪೇಸ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಪ್ರಧಾನಿ ಮೋದಿಯವರ ಯುಎಸ್ ಪ್ರವಾಸದ ನಡುವೆ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಇದು ವಾಯುಪಡೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದೆ.

ಒಪ್ಪಂದದ ಅನ್ವಯ ಜನಲರ್‌ ಎಲೆಕ್ಟ್ರಿಕ್‌ನ ಏರೋಸ್ಪೇಸ್‌ ಘಟಕ, ತೇಜಸ್ ಯುದ್ಧ ವಿಮಾನಕ್ಕೆ F404 ಎಂಜಿನ್ ಅನ್ನು ಪೂರೈಸುತ್ತದೆ. ಈ ಎಂಜಿನ್ ಅನ್ನು 83 ತೇಜಸ್ ವಿಮಾನಗಳಲ್ಲಿ ಬಳಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬುಧವಾರವಷ್ಟೇ ಜಿಇ ಏರೋಸ್ಪೇಸ್‌ನ ಮುಖ್ಯವ್ಯವಸ್ಥಾಪಕ ಅಧಿಕಾರಿ ಲ್ವಾರೆನ್ಸ್‌ ಕಲ್ಪ್‌ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲಿಯೇ ಐತಿಹಾಸಿಕ ಒಪ್ಪಂದ ಘೋಷಣೆಯಾಗಿದೆ.

ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಹಾಗೂ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ 2027-28ರ ವೇಳೆಗೆ ಜಂಟಿಯಾಗಿ ತೇಜಸ್‌ ಮಾರ್ಕ್‌-2 ಫೈಟರ್‌ ಜೆಟ್‌ಅನ್ನು ಅಭಿವೃದ್ಧಿ ಮಾಡಲಿದೆ.ಜಿಇ ಏರೋಸ್ಪೇಸ್‌ ಇಂಜಿನ್‌ ಇರಲಿದೆ. ಅದಕ್ಕೂ ಮುನ್ನವೇ ಅಂದರೆ, 2024ರ ಅಂತ್ಯದ ವೇಳೆಗೆ ಜಿಇ 414 ಇಂಜಿನ್‌ ಹೊಂದಿರುವ ತೇಜಸ್‌ ಮಾರ್ಕ್‌-2 ವಿಮಾನದ ಮಾದರಿ ಬಿಡುಗಡೆಯಾಗಲಿದೆ.ಅದರೊಂದಿಗೆ ಒಪ್ಪಂದದ ಪ್ರಕಾರ ಜಿಇ-414 ಇಂಜಿನ್‌ ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಾಣವಾಗಲಿದೆ.

ಶೇ.100ರಷ್ಟು ಟ್ರಾನ್ಸ್‌ಫರ್‌ ಆಫ್‌ ಟೆಕ್ನಾಲಜಿ ಒಪ್ಪಂದವನ್ನೂ ಇದು ಹೊಂದಿದೆ. ಆದರೆ, ಇದಕ್ಕೆ ಯುಎಸ್‌ ಕಾಂಗ್ರೆಸ್‌ ಒಪ್ಪಿಗೆ ಬೇಕಾಗಲಿದೆ. ಟ್ರಾನ್ಸಫರ್‌ ಆಫ್‌ ಟೆಕ್ನಾಲಜಿ ಎಂದರೆ, ಇಂಜಿನ್‌ ನಿರ್ಮಾಣದ ಸಂಪೂರ್ಣ ತಾಂತ್ರಿಕ ಮಾಹಿತಿಯನ್ನು ಭಾರತದೊಂದಿಗೆ ಹಸ್ತಾಂತರ ಮಾಡಿಕೊಳ್ಳುವುದು. ಇದು ತೇಜಸ್‌ ಮಾರ್ಕ್‌-2 ಟ್ವಿನ್‌ ಇಂಜಿನ್‌ ಸುಧಾರಿತ ಮಲ್ಟಿ ರೋಲ್‌ ಯುದ್ಧವಿಮಾನ ಮಾತ್ರವಲ್ಲದೆ, ಟ್ವಿನ್‌ ಇಂಜಿನ್‌ ಡೆಕ್‌ ಬೇಸ್ಡ್‌ ಫೈಟರ್‌ ಜೆಟ್‌ ಅಂದರೆ ನೌಕಾಸೇನೆಯ ವಿಮಾನಗಳಿಗೂ ಇದರ ಇಂಜಿನ್‌ ಬಳಕೆಯಾಗಲಿದೆ.

GE ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು GE ಏರೋಸ್ಪೇಸ್‌ನ ಸಿಇಒ ಎಚ್‌. ಲಾರೆನ್ಸ್ ಕಲ್ಪ್, ಜೂನಿಯರ್ ಈ ಒಪ್ಪಂದವನ್ನು ‘ಭಾರತ ಮತ್ತು HAL ಜೊತೆಗಿನ ನಮ್ಮ ದೀರ್ಘಕಾಲದ ಪಾಲುದಾರಿಕೆಯಿಂದ ಇದು ಐತಿಹಾಸಿಕ ಒಪ್ಪಂದವಾಗಿದೆ’ ಎಂದು ಹೇಳಿದ್ದಾರೆ.

ಅಧ್ಯಕ್ಷ ಬಿಡೆನ್ ಮತ್ತು ಪ್ರಧಾನಿ ಮೋದಿಯವರ ಎರಡು ರಾಷ್ಟ್ರಗಳ ನಡುವಿನ ನಿಕಟ ಸಮನ್ವಯದ ದೃಷ್ಟಿಯನ್ನು ಮುನ್ನಡೆಸುವಲ್ಲಿ ಪಾತ್ರ ವಹಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ F414 ಎಂಜಿನ್‌ಗಳು ಯಾವುದಕ್ಕೂ ಸಾಟಿಯಲ್ಲ ಮತ್ತು ಎರಡೂ ದೇಶಗಳಿಗೆ ಪ್ರಮುಖ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ಪ್ರಯೋಜನಗಳನ್ನು ನೀಡುತ್ತವೆ, ಏಕೆಂದರೆ ನಮ್ಮ ಗ್ರಾಹಕರು ತಮ್ಮ ಮಿಲಿಟರಿ ಫ್ಲೀಟ್‌ನ ಅಗತ್ಯಗಳನ್ನು ಪೂರೈಸಲು ಉತ್ತಮ ಗುಣಮಟ್ಟದ ಎಂಜಿನ್‌ಗಳನ್ನು ಉತ್ಪಾದಿಸಲು ನಾವು ಸಹಾಯ ಮಾಡುತ್ತೇವೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!