ಹೊಸದಿಗಂತ ವರದಿ,ವಿಜಯಪುರ:
ಲೋಕಸಭಾ ಚುನಾವಣೆ ಬಳಿಕ, ಇಲ್ಲ ಮೊದಲು ಅನಾಹುತ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೊ ಒಂದು ಅನಾಹುತ ಆಗಲಿದೆ. ಈ ಅನಾಹುತ ಕಾಂಗ್ರೆಸ್ ಭಯ ತರಿಸಿದೆ. ಇನ್ನೂ 135 ಶಾಸಕರ ಮೇಲೆ ಕಾಂಗ್ರೆಸ್‌ಗೆ ವಿಶ್ವಾಸವಿಲ್ಲ. ಬಿಜೆಪಿಯವರು ಬಂದರೇನೆ ಗೆಲ್ಲುತ್ತಿವಿ ಎನ್ನುವ ಭಾವನೆ ಇದೆ ಎಂದರು.
ಇದರಿಂದ ಕಾಂಗ್ರೆಸ್ ಭಯದಲ್ಲಿದೆ. ಇದರಿಂದ ಬಿಜೆಪಿ ಕರ್ನಾಟಕದಲ್ಲಿ ಕಳೆದು ಹೋಗ್ತಿದೆ ಎನ್ನುವ ಕಾರಣಕ್ಕೆ ಗೊಂದಲ ಕ್ರಿಯೆಟ್ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.