ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ರಾಜ್ಯಕ್ಕೆ ಮತ್ತೆ ಶಾಕ್ ನೀಡಿದ್ದು, ಸಭೆಯಲ್ಲಿ ಸಮಿತಿ ಮುಂದಿನ 15ದಿನಗಳ ಕಾಲ ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಈಗಾಗಲೇ ಮೈಸೂರು, ಮಂಡ್ಯ ಮತ್ತಿತರ ಕಡೆಗಳಲ್ಲಿ ರೈತರು, ವಿವಿಧ ಸಂಘಟನೆಗಳು ಪ್ರತಿಭಟನೆ, ಧರಣಿ ನಡೆಸುತ್ತಿರುವ ನಡುವೆಯೇ ಈ ಆದೇಶ ಹೊರಬಿದ್ದಿದ್ದು ಅನ್ನದಾತರನ್ನು ಕಂಗಾಲಾಗಿಸಿದೆ.
ಇಂದು ನಡೆದ ಸಭೆಯಲ್ಲಿ ಎಸಿಎಸ್ ರಾಕೇಶ್ ಸಿಂಗ್, ಕರ್ನಾಟಕದ ಪರ ಭಾಗವಹಿಸಿ ವಾದ ಮಂಡಿಸಿದ್ದರು.