ಸಿರಿಧಾನ್ಯ ಬೆಳೆಗಳಿಗೆ ಪ್ರೋತ್ಸಾಹಿಸುತ್ತಿರುವ ಪ್ರಧಾನಿ ಮೋದಿಯನ್ನು ಮತ್ತೊಮ್ಮೆ ಬೆಂಬಲಿಸಿ: ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ,ರಾಯಚೂರು :

ಅನ್ನದಾತರ ಸ್ವಾವಲಂಬಿ ಬದುಕಿಗಾಗಿ ಕಡಿಮೆ ವೆಚ್ಚದಲ್ಲಿ ಅಧಿಕ ಆದಾಯ ಬರುವದಕ್ಕಾಗಿ. ರೈತರು ರಸಗೊಬ್ಬರ ಬಳಕೆಯಿಂದ ಹೊರಬರುವುದಕ್ಕೆ ಸಿರಿ ಧಾನ್ಯ ಬೆಳೆಗಳಿಗೆ ಪ್ರೋತ್ಸಾಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮವಹಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಜಿಲ್ಲೆಯ ಲಿಂಗಸುಗೂರು ಪ್ರಟ್ಟಣದ ಶ್ರೀವಿಜಯ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿ ಮಾತನಾಡಿ, ವಿಶ್ವಮಟ್ಟದಲ್ಲಿ ಸಿರಿಧಾನ್ಯಗಳ ಮಹತ್ವವನ್ನು ಪ್ರಧಾನಿ ಮೋದಿಯವರು ಗಮನಸೆಳೆದಿದ್ದಾರೆ ಹೀಗಾಗಿ ಈ ಧಾನ್ಯಗಳಿಗೆ ವಿಶ್ವಮಟ್ಟದಲ್ಲಿ ಬಹಳ ಬೇಡಿಕೆ ಕಂಡುಬರುತ್ತಿದೆ. ಇದು ದೇಶದ ರೈತರಿಗೆ ಹೆಚ್ಚಿನ ಆದಾಯವನ್ನು ತಂದುಕೊಡಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪ್ರತಿ ಬೂತ್ ಮಟ್ಟದಲ್ಲಿ ಮತಗಳಿಕೆಯ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರಲ್ಲದೆ ಕೇಂದ್ರದಲ್ಲಿ ಮೋದಿ ಸರಕಾರ ಬರುವುದು ಎಷ್ಟು ಗ್ಯಾರೆಂಟಿಯೋ ಮತ್ತೊಮ್ಮೆ ರಾಜ ಅಮರೇಶ ನಾಯಕ ಅವರು ಸಂಸದರಾಗುವುದು ಅಷ್ಟೇ ಗ್ಯಾರಂಟಿ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದರೆ ಅದು ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ. ನೀರಾವರಿ ಸೌಲಭ್ಯ ವದಗಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಇದರಿಂದ ಇಲ್ಲಿನ ರೈತರ ಬದುಕು ಹಸನವಾಗಿದೆ ಎಂದರು.

ಯಡಿಯೂರಪ್ಪ ಸವರು ಸಿಎಂ ಆಗಿದ್ದ ಸಂದರ್ಭದಲ್ಲಿ ಅತ್ಯಧಿಕ ಮಳೆಯಿಂದ ರಾಜ್ಯದ ಬಹತೇಖ ಭಾಗ ನೆರೆಹಾವಳಿ ತುತ್ತಾಗಿತ್ತು. ಆಗ ಯಡಿಯೂರಪ್ಪ ಅವರು ಪರಿಹಾರವನ್ನು ಯುದ್ಧೋಪದಿಯಲ್ಲಿ ಕೈಗೊಂಡಿದ್ದರು. ವಿಶೇಷವಾಗಿ ಕಲ್ಯಾಣ ಕರ್ನಟಕ ಭಾಗಕ್ಕೆ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಇಲ್ಲಿನ ಜನತೆಯ ನೆರವಿಗೆ ಧಾವಿಸಿ ಬಂದಿದ್ದರು. ಮನೆ ನಿರ್ಮಿಸಲು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದನ್ನು ಯಾರು ಮರೆಯಲು ಸಾದ್ಯ ಎಂದು ಹೇಳಿದರು.

ರಾಜ್ಯ ಸರ್ಕಾರ ಗ್ಯಾರಂಟಿ ನೀಡಿದೆ ಎನ್ನುವ ನೆಪದಲ್ಲಿ ಉಳಿದೆಲ್ಲ ಅಭಿವೃದ್ಧಿಕಾರ್ಯಗಳಿಗೆ ಬ್ರೆಕ್ ಹಾಕಿದೆ. ಅತ್ಯವಷ್ಯಕ ಅಭಿವೃದ್ಧಿ ಕಾರ್ಯಗಳೂ ಸಹ ಆಗುತ್ತಿಲ್ಲ. ಇದರಿಂದ ಜನತೆ ಸಂಕಷ್ಟವನ್ನು ಎದುರಿಸುವಂತಾಗಿದೆ. ಮತ್ತೆ ಅಭಿವೃದ್ಧಿ ಕಾರ್ಯಗಳು ಆಗುವುದಕ್ಕೆ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೇಳಿಕೊಂಡರು.

ವೇದಿಕೆಯಲ್ಲಿ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ, ಶಾಸಕ ಮಾನಪ್ಪ ವಜ್ಜಲ್, ಶರಣು ತಳ್ಳಿಕೇರಿ, ವೀರಣ್ಣಗೌಡ ಲಕ್ಕಿಹಾಳ್, ರಾಜ ಶ್ರೀನಿವಾಸ ನಾಯಕ, ರಾಜ ಸೋಮನಾಥ್ ನಾಯಕ್, ಶರಣಪ್ಪ ಮೇಟಿ, ಹನುಮಂತ ಕಂದಗಲ್, ಜೂವಲಪ್ಪ ನಾಯಕ, ನಾರಾಯಣ ನಾಯಕ, ಅಯ್ಯಪ್ಪ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!