ಮತ್ತೆ ಡ್ರ್ಯಾಗನ್ ಕಿರಿಕ್: ಅರುಣಾಚಲ ಪ್ರದೇಶ ಸಾರ್ವಭೌಮ ಹಕ್ಕು ಎಂದ ಚೀನಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾ ಅರುಣಾಚಲ ಪ್ರದೇಶದ (Arunachal Pradesh) ಸ್ಥಳಗಳಿಗೆ ಮರುನಾಮಕರಣ ಮಾಡಲು ಹೊರಟಿದ್ದು, ಈ ಯತ್ನವನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ.

ಇದರ ಬೆನ್ನಲ್ಲೇ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ, ಝಂಗ್ನಾನ್ (ಅರುಣಾಚಲ ಪ್ರದೇಶ) ಚೀನಾದ ಭೂಪ್ರದೇಶದ ಭಾಗವಾಗಿದೆ. ರಾಜ್ಯ ಕೌನ್ಸಿಲ್​​ನ ಭೌಗೋಳಿಕ ಹೆಸರುಗಳ ಆಡಳಿತದ ಸಂಬಂಧಿತ ಷರತ್ತುಗಳಿಗೆ ಅನುಗುಣವಾಗಿ, ಚೀನಾ ಸರ್ಕಾರದ ಸಮರ್ಥ ಅಧಿಕಾರಿಗಳು ಜಂಗ್ನಾನ್‌ನ ಕೆಲವು ಭಾಗಗಳ ಹೆಸರುಗಳನ್ನು ಪ್ರಮಾಣೀಕರಿಸಿದ್ದಾರೆ. ಇದು ಚೀನಾದ ಸಾರ್ವಭೌಮ ಹಕ್ಕುಗಳಲ್ಲಿದೆ ಎಂದಿದ್ದಾರೆ.

ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಮರುನಾಮಕರಣ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ,ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಹೇಳಿದ್ದಾರೆ.

ಅಮೆರಿಕ ಕೂಡ ಮರುನಾಮಕರಣ ಮಾಡುವ ಮೂಲಕ ಅರುಣಾಚಲ ಪ್ರದೇಶದ ಭಾರತೀಯ ಭೂಪ್ರದೇಶದ ಮೇಲೆ ಹಕ್ಕು ಸಾಧಿಸುವ ಚೀನಾದ ಪ್ರಯತ್ನಗಳನ್ನು ತೀವ್ರವಾಗಿ ವಿರೋಧಿಸುತ್ತದೆ ಶ್ವೇತಭವನ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!