ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗೆ ತೆರೆ ಬಿದ್ದಿದ್ದು, ಇದರ ಬೆನ್ನಲ್ಲೇ ಚುನಾಣೋತ್ತರ ಸಮೀಕ್ಷೆ (Exit Polls) ಭವಿಷ್ಯ ನುಡಿಯುತ್ತಿದೆ.
ಪಿ ಮಾರ್ಕ್ ಸಮೀಕ್ಷಾ ವರದಿ ಪ್ರಕಾರ , ಚುನಾವಣೆಯಲ್ಲಿ ಎನ್‌ಡಿಎ 359 ಕ್ಷೇತ್ರ, I.N.D.I.A. ಒಕ್ಕೂಟ 154 ಹಾಗೂ ಇತರೆ ಅಭ್ಯರ್ಥಿಗಳು 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಇದರೊಂದಿಗೆ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುವುದು ಖಚಿತವಾಗಿದೆ. ಲೋಕಸಭೆ ಚುನಾವಣೆಯುದ್ದಕ್ಕೂ I.N.D.I.A. ಒಕ್ಕೂಟ ಅಬ್ಬರದ ಪ್ರಚಾರ ನಡೆಸಿದರೂ, ಮೂರನೇ ಬಾರಿಗೂ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂಬುದು ಬಹುತೇಕ ಸಮೀಕ್ಷಾ ವರದಿಗಳ ಲೆಕ್ಕಾಚಾರವಾಗಿದೆ.
ಇಂಡಿಯಾ ನ್ಯೂಸ್ ಎನ್‌ಡಿಎಗೆ 371 ಸ್ಥಾನ ನೀಡಿದರೆ I.N.D.I.A. ಒಕ್ಕೂಟಕ್ಕೆ 125, ಇತರರಿಗೆ 47 ಸ್ಥಾನ ನೀಡಿವೆ.
ಮಾಟ್ರಿಜ್ ಎನ್‌ಡಿಎಗೆ 353-368, I.N.D.I.A. ಒಕ್ಕೂಟಕ್ಕೆ 118-133, ಇತರರಿಗೆ 30 ಸ್ಥಾನ ನೀಡಿದೆ.
ಮುಂಬೈ ಸಟ್ಟಾ ಬಜಾರ್ ವರದಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿತ್ತು. ಕಾಂಗ್ರೆಸ್ ಈ ಬಾರಿ 55-65 ಕ್ಷೇತ್ರಗಳಲ್ಲಿ ಮಾತ್ರ ಜಯಿಸಲಿದೆ.