ಅಗ್ನಿ-5 ಕ್ಷಿಪಣಿ ಪರೀಕ್ಷಾ ಹಾರಾಟ ಯಶಸ್ವಿ: ದೇಶದ ಜನತೆಗೆ ಗುಡ್ ನ್ಯೂಸ್ ನೀಡಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಿಷನ್ ದಿವ್ಯಾಸ್ತ್ರ ಎಂದು ಕರೆಯುವ ಅಗ್ನಿ-5 ಕ್ಷಿಪಣಿಯ ಮೊಟ್ಟಮೊದಲ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.

ಈ ಕುರಿತು ಮಾಹಿತಿ ನೀಡಿದ ಪ್ರಧಾನಿ ಮೋದಿ , ಅಗ್ನಿ-5 ಕ್ಷಿಪಣಿಯ ಮೊಟ್ಟಮೊದಲ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆದಿದ್ದು,ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಪರೀಕ್ಷಾ ಹಾರಾಟದ ವಿಶಿಷ್ಟತೆ ಏನೆಂದರೆ, ಇದು ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನವನ್ನು ಹೊಂದಿದೆ, ಇದು ನಿಖರವಾದ ಮತ್ತು ಉದ್ದೇಶಿತ ದಾಳಿಯನ್ನು ಮಾಡುವ ಸಲುವಾಗಿ ಕ್ಷಿಪಣಿಯು ಬಹು ಮರು-ಪ್ರವೇಶ ವಾಹನಗಳಾಗಿ ವಿಭಜಿಸಬಹುದು ಎಂದು ತಿಳಿಸಲಾಗಿದೆ.

ಮಿಷನ್‌ ದಿವ್ಯಾಸ್ತ್ರ ಯೋಜನೆಯ ಡೈರೆಕ್ಟರ್‌ ಮಹಿಳೆಯಾಗಿರುವುದು ವಿಶೇಷವಾಗಿದೆ. ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟದ ಪರೀಕ್ಷೆಯಾದ ಮಿಷನ್ ದಿವ್ಯಾಸ್ತ್ರಕ್ಕಾಗಿ ನಮ್ಮ ಡಿಆರ್‌ಡಿಓ ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!